Wednesday, January 22, 2025

ವಿದ್ಯುತ್ ಶಾಕ್ ಸರ್ಕ್ಯೂಟ್​ನಿಂದ ಬೆಂಕಿ ಅವಘಡ

ಹಾವೇರಿ : ವಿದ್ಯುತ್ ಶಾಕ್ ಸರ್ಕ್ಯೂಟ್ ಹಿನ್ನೆಲೆ ಪಟಾಕಿ ಅಂಗಡಿಗೆ ಬೆಂಕಿ ಸಂಭವಿಸಿರುವ ಘಟನೆ ಗ್ರಾಮೀಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆಲದಕಟ್ಟಿ ಗ್ರಾಮದ ವೀರೇಶ ಸಾತೇನಹಳ್ಳಿ ಅವರಿಗೆ ಸೇರಿದ್ದ, ಭೂಮಿಕ ಟ್ರೇಡರ್ಸ್​ ಎಂಬ ಅಂಗಡಿಯಲ್ಲಿ ಹಲವು ದಿನಗಳಿಂದ ಪಟಾಕಿಗಳನ್ನು ಇಟ್ಟು ಮಾರಾಟ ಮಾಡುತ್ತಿದ್ದರು. ಆದರೆ ಇಂದು ವಿದ್ಯುತ್ ಶಾಕ್ ಸರ್ಕ್ಯೂಟ್​ ಸಂಭವಿಸಿ ಅಂಗಡಿಗೆ ಬೆಂಕಿ ಹತ್ತಿಕೊಂಡಿದೆ.

ಇದನ್ನು ಓದಿ : ತುಘಲಕ್ ಸರ್ಕಾರದ ದಿನಗಳು 100, ಸಮಸ್ಯೆಗಳು 1,000 : ಕಟೀಲ್ ಕಿಡಿ

ಈ ವೇಳೆ ಅಂಗಡಿ ಕೆಳಗಡೆ ನಿಲ್ಲಿಸಿದ್ದ ಬೈಕ್ ಹಾಗೂ ಟಾಟಾ ಏಸ್ ಗಾಡಿಗಳು ಅಂಗಡಿಯ ಜೊತೆ ಸುಟ್ಟು ಭಸ್ಮವಾಗಿ ಹೋಗಿದೆ. ಬಳಿಕ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿಗಳು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

RELATED ARTICLES

Related Articles

TRENDING ARTICLES