Sunday, November 17, 2024

ಬಾಲಕನಿಗೆ ಒಂದೇ ಹಾವಿನಿಂದ 9 ಬಾರಿ ಕಡಿತ: ಆಸ್ಪತ್ರೆಗೆ ದಾಖಲು

ಕಲಬುರಗಿ: ಕಳೆದ 2 ಎರಡು ತಿಂಗಳಲ್ಲಿ ಬಾಲಕನೊಬ್ಬ ಒಂದೇ ಹಾವಿನಿಂದ ಬರೋಬ್ಬರಿ 9 ಬಾರಿ ಕಡಿತಕ್ಕೆ ಒಳಗಾದರೂ ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿರುವ ಘಟನೆ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ನಡೆದಿದೆ.

ಹಲಕರ್ಟಿ ಗ್ರಾಮದ ಪ್ರಜ್ವಲ್​. ಹಾವುನಿಂದ ಕಡಿತಕ್ಕೊಳಗಾದ ಬಾಲಕ, ಹಲಕರ್ಟಿ ಗ್ರಾಮದ ವಿಜಯಕುಮಾರ್-ಉಷಾ ದಂಪತಿಯ ಪುತ್ರ. ಗ್ರಾಮದ ತನ್ನ ಮನೆಯಲ್ಲಿ ಮೊದಲ ಬಾರಿ ಜುಲೈ 3 ರಂದು ಹಾವು ಕಡಿಯಿತು. ಬಳಿಕ ಎರಡು ಮೂರು ಬಾರಿ ಹಾವು ಕಚ್ಚಿದ ಹಿನ್ನಲೆಯಲ್ಲಿ ದಂಪತಿ ಹೆದರಿ ಹಲಕರ್ಟಿ ಗ್ರಾಮದ ಮನೆ ಖಾಲಿ ಮಾಡಿ ಬೇರೆಡೆಗೆ ಹೋಗಿದ್ದರು.

ಇದನ್ನೂ ಓದಿ: ಗ್ಯಾರೆಂಟಿ ಯೋಜನೆ ಜಾರಿ : ಇಂದು ಚಾಮುಂಡಿ ಬೆಟ್ಟದಲ್ಲಿ ಸಿದ್ದು, ಡಿಕೆಶಿ ವಿಶೇಷ ಪೂಜೆ

ಹಲಕರ್ಟಿ ಬಳಿಕ ಚಿತ್ತಾಪುರ ತಾಲ್ಲುಕಿನ ವಾಡಿಯಲ್ಲಿ ಮನೆ ಮಾಡಿ ವಾಸ ಮಾಡುತ್ತಿದ್ದರು. ಆದರೆ, ಇಲ್ಲಿಯೂ ಪ್ರಜ್ವಲ್​ಗೆ ಅದೇ ಹಾವು ಕಡಿದಿದೆ. ಬಾಲಕನ ಕೈ-ಕಾಲು ಸೇರಿ ಹಾವು ವಿವಿಧಡೆ ಕಚ್ಚಿದೆ. ಆದರೆ, ಹಾವು ಮಾತ್ರ ಪಾಲಕರಿಗಾಗಲಿ ಅಥವಾ ಕುಟುಂಬಸ್ಥರಿಗಾಗಲಿ ಕಾಣಿಸಿಕೊಳ್ಳುತ್ತಿಲ್ಲ. ಬಾಲಕನ ಕಣ್ಣಿಗೆ ಮಾತ್ರ ಕಾಣಿಸಿಕೊಳ್ಳುತ್ತಿದೆ. ಈ ಘಟನೆಯು ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್​ ಆದ ಬಳಿಕ ಎರಡು ಮೂರು ದಿನದಲ್ಲೆ ಮತ್ತೆ ಹಾವು ಕಡಿಯುತ್ತಿದೆ. ಸದ್ಯ ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಬಾಲಕ ಪ್ರಜ್ವಲ್​ಗೆ ಚಿಕಿತ್ಸೆ ಮುಂದುವರಿದಿದೆ.

RELATED ARTICLES

Related Articles

TRENDING ARTICLES