ಬೆಂಗಳೂರು : 100 ದಿನಗಳಲ್ಲಿ ತುಘಲಕ್ ಸರ್ಕಾರದ ಸಾವಿರಾರು ತಪ್ಪು ಮಾಡಿದೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಚಾರ್ಜ್ ಶೀಟ್ ಬಿಡುಗಡೆ ಮಾಡಿ ಮಾತನಾಡಿದ ಅವರು, ರಾಜ್ಯದ ಜನರಿಗೆ ಕಾಂಗ್ರೆಸ್ ಸರ್ಕಾರ ದ್ರೋಹ ಮಾಡಿದೆ. ಅಧಿಕಾರಕ್ಕೆ ಬರುವ ಮುನ್ನ ಹಲವು ಗ್ಯಾರಂಟಿ ಘೋಷಿಸಿ, ಬಳಿಕ ಯೋಜನೆಗಳಿಗೆ ಷರತ್ತು ಹಾಕಿ ಮಾತು ತಪ್ಪಿದೆ ಎಂದು ಕುಟುಕಿದರು.
ಇಬ್ಬರು ಮಂತ್ರಿಗಳ ವಿರುದ್ಧ ಭ್ರಷ್ಟಾಚಾರ ಆರೋಪ ಬಂದಿದೆ. ಯಾವ ಸಚಿವರ ರಾಜೀನಾಮೆ ತೆಗದುಕೊಂಡಿಲ್ಲ. ಪಂಚಾಯತಿ ಕಚೇರಿಯಿಂದ ಮುಖ್ಯಮಂತ್ರಿ ಕಚೇರಿಯವರೆಗೂ ಭ್ರಷ್ಟಾಚಾರ ಇದೆ. ಸಿಎಂ ಕಚೇರಿಯಲ್ಲಿ ಎರಡು ಶಕ್ತಿ ಇದೆ ಅಂತ ಅವರ ಪಕ್ಷದ ಶಾಸಕರು ಹೇಳ್ತಿದ್ದಾರೆ. ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ಸಚಿವರು ಕಾಲ್ ಪಿಕ್ ಮಾಡ್ತಿಲ್ಲ : ಕಾಂಗ್ರೆಸ್ ಶಾಸಕ ಶಿವಗಂಗಾ ಅಳಲು
ಬಿಜೆಪಿ ಕಾರ್ಯಕರ್ತರ ಅರೆಸ್ಟ್
ಬಜೆಟ್ನಲ್ಲಿ ರೈತರ ಪರವಾದ ಯಾವುದೇ ಯೋಜನೆ ಇಲ್ಲ. ನಮ್ಮ ಕಾರ್ಯಕರ್ತರನ್ನು ಅರೆಸ್ಟ್ ಮಾಡಲಾಗ್ತಿದೆ. ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಜಾರಿ ಮಾಡಲಾಗುತ್ತಿದೆ. ಈ ನೂರು ದಿನಗಳಲ್ಲಿ ಈ ಸರ್ಕಾರ ಜನರಿಗೆ ದ್ರೋಹ ಮಾಡಿದೆ. ರಾಜ್ಯದಲ್ಲಿ ಬರ ಇದೆ, ಮಳೆ ಬಂದಿಲ್ಲ. ವಿದ್ಯುತ್ ಅಭಾವ ಕೂಡ ರೈತರಿಗೂ ಕಾಡ್ತಿದೆ ಎಂದು ಚಾಟಿ ಬೀಸಿದರು.
ನಮ್ಮ ಕಾಲದಲ್ಲಿ ಬಂಡವಾಳ ಹೂಡಿಕೆ ಅತಿ ಹೆಚ್ಚು ಬಂದಿತ್ತು. ಆದರೆ, ಇವತ್ತಿನ ವಿದ್ಯುತ್ ದರ ಏರಿಕೆ, ವ್ಯತ್ಯಯದಿಂದ ಹೂಡಿಕೆ ದಾರರು ವಾಪಸ್ಸು ಹೋಗ್ತಿದ್ದಾರೆ ಎಂದು ಮಾತು ಮಾತಿಗೂ ಕಾಂಗ್ರೆಸ್ ತಪ್ಪು ಬೊಟ್ಟು ಮಾಡಿದರು.