Sunday, December 22, 2024

ಪ್ರೀತ್ಸೆ ಪ್ರೀತ್ಸೆ ಎಂದು ಯುವತಿಗೆ ಚಾಕು ಹಾಕಿದ ಯುವಕ!

ರಾಮನಗರ : ಯುವತಿಗೆ ಲವ್​ ಮಾಡುವಂತೆ ಕಿರುಕುಳ ನೀಡುತ್ತಿದ್ದ ಯುವಕನೋರ್ವ ಇಂದು ಬೆಳಗ್ಗೆ ಯುವತಿಗೆ ಚಾಕುವಿನಂದೆ ಹಲ್ಲೆ ಮಾಡಿ ಕಿಡ್ನಾಪ್​ ಮಾಡಿದ್ದು ಸದ್ಯ ಆರೋಪಿಯನ್ನು ಬಂಧಿಸಲಾಗಿದೆ ಎಂದು ರಾಮನಗರ ಎಸ್.​ಪಿ ಕಾರ್ತಿಕ್​ ರೆಡ್ಡಿ ತಿಳಿಸಿದ್ದಾರೆ.

ಘಟನೆ ಕುರಿತು ಮಾದ್ಯಮದವರೊಂದಿಗೆ ಮಾತನಾಡಿದರು, ಇಂದು ಬೆಳಗ್ಗೆ ಸುಮಾರು  ಬೆಳಿಗ್ಗೆ 9.15ರ ವೇಳೆಗೆ ವಿದ್ಯಾರ್ಥಿಗೆ ಚಾಕುಹಾಕಿ, ಇನೋವಾ ಕಾರಿನಲ್ಲಿ ಕಿಡ್ನಾಪ್ ಮಾಡಿದ್ದಾರೆ. ಕೃತ್ಯಕ್ಕೆ ಬಳಸಿದ ಕಾರಿನ ನಂಬರ್ ಆಧಾರದ ಮೇಲೆ ಜಿಪಿಎಸ್ ಟ್ರಾಕ್ ಮಾಡಿದಾಗ ರಾಮಕೃಷ್ಣ ಆಸ್ಪತ್ರೆಯ ಲೊಕೇಷನ್ ಸಿಕ್ಕಿದೆ.

ಇದನ್ನೂ ಓದಿ: ಚಂದ್ರನನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಿ : ಚಕ್ರಪಾಣಿ ಮಹಾರಾಜ

ಲೊಕೇಷನ್​ ಮೂಲಕ ಪತ್ತೆಹಚ್ಚಲಾಗಿದ್ದು ಪರಿಶೀಲನೆ ಮಾಡಿದಾಗ ಆರೋಪಿ ಇಲ್ಲೇ ಸಿಕ್ಕಿ ಬಿದ್ದಿದ್ದಾನೆ. ಯುವತಿಗೆ ಚಾಕುವಿನಂದ ಹಲ್ಲೆ ಮಾಡಿ ಬಳಿಕ ಆಸ್ಪತ್ರೆಗೆ ತಾನೆ ದಾಖಲಿಸಿದ್ದಾನೆ, ‘

ಸದ್ಯ ಆರೋಪಿಯನ್ನ ಬಂಧನ ಮಾಡಲಾಗಿದ್ದು ಯುವತಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿ ಲವ್ ಮಾಡುವಂತೆ ಯುವತಿಗೆ ಕಿರುಕುಳ ನೀಡಿದ್ದ. ಹಿಂದೆ ಕೂಡಾ ಈ ವಿಚಾರವಾಗಿ ಗಲಾಟೆ ಮಾಡಿದ್ದ. ಸದ್ಯ ಎಲ್ಲಾ ಮಾಹಿತಿ ಪಡೆದು ವಿಚಾರಣೆ ಮಾಡಲಾಗುತ್ತಿದೆ  ಎಂದು ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ ಹೆಳಿದರು.

RELATED ARTICLES

Related Articles

TRENDING ARTICLES