ಚಂದ್ರನ ಮೇಲ್ಮೈಗೆ ಹೆಸರಿಡುವ ಹಕ್ಕನ್ನು ನರೇಂದ್ರ ಮೋದಿಗೆ ನೀಡಿದವರು ಯಾರು? ಇದು ಹಾಸ್ಯಾsಸ್ಪದ ಎಂದು ಕಾಂಗ್ರೆಸ್ನ ಹಿರಿಯ ನಾಯಕ ರಶೀದ್ ಅಲ್ವಿ ಮೋದಿ ವಿರುದ್ದ ಕಿಡಿಕಾರಿದ್ದಾರೆ.
ಖಾಸಗಿ ಮಾಧ್ಯಕ್ಕೆ ಪ್ರತಿಕ್ರಿಯಿಸಿದ ಅವರು, ‘ಚಂದ್ರನ ಮೇಲ್ಮೈಗೆ ಹೆಸರಿಡುವ ಹಕ್ಕನ್ನು ನರೇಂದ್ರ ಮೋದಿಗೆ ನೀಡಿದವರು ಯಾರು? ಇದು ಹಾಸ್ಯಾಸ್ಪದ. ಈ ನಾಮಕರಣದ ನಂತರ ಇಡೀ ಜಗತ್ತು ನಮ್ಮನ್ನು ನೋಡಿ ನಗುತ್ತದೆ. ಚಂದ್ರನ ಆ ಸ್ಥಳದಲ್ಲಿ ಲ್ಯಾಂಡಿಂಗ್ ಸಂಭವಿಸಿದೆ. ಇದು ತುಂಬಾ ಒಳ್ಳೆಯದು ಮತ್ತು ನಾವು ಅದರ ಬಗ್ಗೆ ಹೆಮ್ಮೆಪಡುತ್ತೇವೆ. ಅದರಲ್ಲಿ ಯಾರೂ ಅನುಮಾನಿಸಬಾರದು.
ಆದರೆ, ನಾವು ಚಂದ್ರನ ಮಾಲೀಕರಲ್ಲ, ಆ ಲ್ಯಾಂಡಿಂಗ್ ಪಾಯಿಂಟ್ ಅನ್ನು ನಾವು ಹೊಂದಿಲ್ಲ. ಇದನ್ನು ಮಾಡುವುದು ಬಿಜೆಪಿಯ ಅಭ್ಯಾಸವಾಗಿದೆ. ಅಧಿಕಾರಕ್ಕೆ ಬಂದಾಗಿನಿಂದಲೂ ಹೆಸರು ಬದಲಿಸಿಕೊಳ್ಳುವುದು ಅವರ ಅಭ್ಯಾಸವಾಗಿದೆ ಎಂದು ಕಿಡಿಕಾರಿದರು.
ಶಿವಶಕ್ತಿ ಪಾಯಿಂಟ್ ಎಂದು ಹೆಸರಿಟ್ಟ ಮೋದಿ :
ಚಂದ್ರಯಾನ 3 ಚಂದ್ರನ ಮೇಲ್ಮೈ ಮೇಲೆ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಲ್ಯಾಂಡ್ ಆದ ಹಿನ್ನೆಲೆ ಶನಿವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಇಸ್ರೋ ನಿಯಂತ್ರಣ ಕೇಂದ್ರಕ್ಕೆ ಆಗಮಿಸಿ ವಿಜ್ಞಾನಿ ಗಳನ್ನು ಶ್ಲಾಘಿಸಿ ಸಂವಾದ ನಡೆಸುವ ವೇಳೆ ಮಾತನಾಡಿದ ಅವರು, ನಮ್ಮ ಚಂದ್ರಯಾನವು ಬಂದಿಳಿದ ಚಂದ್ರನ ಭಾಗಕ್ಕೆ ಹೆಸರಿಸಲು ಭಾರತ ನಿರ್ಧರಿಸಿದೆ. ಚಂದ್ರಯಾನ -3ರ ಚಂದ್ರನ ಲ್ಯಾಂಡರ್ ಇಳಿದ ಸ್ಥಳವನ್ನು ಈಗ ‘ಶಿವಶಕ್ತಿ’ ಪಾಯಿಂಟ್ ಎಂದು ಕರೆಯಲಾಗುತ್ತದೆ ಎಂದು ಹೇಳಿಕೆ ನೀಡಿದ್ದರು.