Wednesday, January 22, 2025

ಬೇಕಂತಲೆ ಕ್ಯಾಂಟರ್ ಲಾರಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು : ಘಟನೆ ಸಿಸಿಟಿಯಲ್ಲಿ ಸೆರೆ

ದೊಡ್ಡಬಳ್ಳಾಪುರ : ಅಪರಿಚಿತ ವ್ಯಕ್ತಿಯೋರ್ವ ಚಲಿಸುತ್ತಿದ್ದ ಕ್ಯಾಂಟರ್ ಕೆಳಗೆ ಹಾರಿ ಚಕ್ರಕ್ಕೆ ಸಿಲುಕಿ ಬೇಕಂತಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ಸಂಜೆ ನಗರದ ಇಸ್ಲಾಂಪುರದಲ್ಲಿ ನಡೆದಿದೆ.

ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಲಾರಿಯ ಚಕ್ರ ಅಪರಿಚಿತ ವ್ಯಕ್ತಿಯ ಮೇಲೆ ಹರಿದಿದ್ದು, ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: ಜಾಲತಾಣಗಳ ಮೇಲೆ ನಿಗಾ : ಪ್ರತಿ ಠಾಣೆಯಲ್ಲು ವಿಶೇಷ ತಂಡ ರಚನೆ

ತನ್ನ ಪಾಡಿಗೆ ತಾನು ರಸ್ತೆ ಬದಿಯಲ್ಲಿ ಕೈಕಟ್ಟಿಕೊಂಡು ನಿಂತ್ತಿದ್ದಾತ ನೋಡ ನೋಡುತ್ತಲೇ ದಿಢೀರನೆ ಚಲಿಸುತ್ತಿದ್ದ ಲಾರಿಗೆ ಕೆಳಗೆ ಹಾರಿ ಚಕ್ರಕ್ಕೆ ತಲೆ ಕೊಟ್ಟಿದ್ದಾನೆ. ವ್ಯಕ್ತಿಯ ಊರು, ಹೆಸರು ಎಂಬಿತ್ಯಾದಿ ತಿಳಿದು ಬಂದಿಲ್ಲ.

ವ್ಯಕ್ತಿಯ ಆತ್ಮಹತ್ಯೆಗೆ ಏನು ಕಾರಣ ಎಂಬುದು ಸಹ ತಿಳಿದು‌ಬಂದಿಲ್ಲ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

RELATED ARTICLES

Related Articles

TRENDING ARTICLES