Sunday, December 22, 2024

ಮನಸ್ತಾಪ ಬಿಟ್ಟು ಒಂದಾದರಾ ದಚ್ಚು-ಕಿಚ್ಚ!: ಸುಮಲತಾ ಜನ್ಮದಿನದಲ್ಲಿ ಭಾಗಿ

ಬೆಂಗಳೂರು : 6 ವರ್ಷಗಳ ಬಳಿಕ ನಟ ದರ್ಶನ್​ ಮತ್ತು ಸುದೀಪ್​ ಒಂದೇ ಸಮಾರಂಭದಲ್ಲಿ ಸೇರಿದ್ದು ತಮ್ಮ ಹಳೆ ವೈಮನಸ್ಸಿಗೆ ಎಳ್ಳು ನೀರು ಬಿಟ್ಟು ಒಂದಾದರಾ ಎನ್ನುವ ಅನುಮಾನುಗಳು ಈಗ ಅಭಿಮಾನಿಗಳಲ್ಲಿ ಮೂಡಿದೆ.

ಇದನ್ನೂ ಓದಿ: ಬೇಕಂತಲೆ ಕ್ಯಾಂಟರ್ ಲಾರಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು : ಘಟನೆ ಸಿಸಿಟಿಯಲ್ಲಿ ಸೆರೆ

ಕಳೆದ ಶನಿವಾರ ಸಂಜೆ ಹಿರಿಯ ನಟಿ ಹಾಗು ಸಂಸದೆ ಸುಮಲತಾ ಅಂಬರೀಷ್​ ಜನ್ಮದಿನದ ಪ್ರಯುಕ್ತ ಆಯೋಜಿಸಿದ್ದ ಪೂರ್ವಬಾವಿ ಸಭೆಯಲ್ಲಿ ಇಬ್ಬರು ಸ್ಟಾರ್​ ನಟರು ಮುಖಾಮುಖಿಯಾಗಿ ಕಾಣಿಸಿಕೊಂಡಿದ್ದು ಸ್ಟಾರ್‌ ನಟರ ಅಭಿಮಾನಿಗಳಲ್ಲಿ ಸಂತಸ ಮನೆಮಾಡಿತ್ತು. ಇದರೊಂದಿಗೆ ದಚ್ಚು-ಕಿಚ್ಚನ ನಡುವಿನ ಮನಸ್ತಾಪ ಕರಗಿಹೋಯ್ತಾ? ಇಬ್ಬರ ಮುನಿಸಿಗೆ ಬ್ರೇಕ್ ಹಾಕಿದ್ರಾ ಮದರ್ ಇಂಡಿಯಾ ಸುಮಲತಾ ? ಎನ್ನುವ ಸಂಶಯ ಅಭಿಮಾನಿಗಳಲ್ಲಿ ಮನೆಮಾಡಿದೆ.

ಸಣ್ಣ ಪುಟ್ಟ ಮನಸ್ತಾಪಗಳಿಗೆ ಕಳೆದ 6 ವರ್ಷಗಳ ಹಿಂದೆ ಮಾತುಕತೆ ಇಲ್ಲದೇ ತಮ್ಮಪಾಡಿಗೆ ತಾವಿದ್ದ ನಟರು ಯಾವುದೇ ಸಭೆ ಸಮಾರಂಭಗಳಲ್ಲೂ ಜೊತೆಯಾಗಿ ಕಾಣಿಸಿಕೊಂಡಿರಲಿಲ್ಲ. ಆದರೇ, ಶನಿವಾರ ನಡೆದ ಸಂಸದೇ ಸುಮತಲಾ ಅಂಬರೀಷ್​ರ 60 ನೇ ವರ್ಷದ ಜನ್ಮದಿನದ ಪೂರ್ವಭಾವಿ ಸಭೆಗೆ ಆಗಮಿಸಿದ್ದ ದಚ್ಚು-ಕಿಚ್ಚ ಒಬ್ಬರನ್ನೊಬ್ಬರು ನೋಡಿ ಕೇವಲ ಮುಗುಳ್ನಗೆ ನಗುವ ಮೂಲಕ ಸಣ್ಣ ಪುಟ್ಟ ಮನಸ್ತಾಪಗಳಿಗೆ ಎಳ್ಳುನೀರು ಬಿಟ್ಟಿದ್ದಾರೆ ಎನ್ನಲಾಗುತ್ತಿದೆ.

RELATED ARTICLES

Related Articles

TRENDING ARTICLES