Thursday, January 23, 2025

ಬೈಕ್​ಗೆ ಡಿಕ್ಕಿ ಹೊಡೆದ ಕಾರು ; ನಾಲ್ವರಿಗೆ ಗಂಭೀರ ಗಾಯ

ಬೆಂಗಳೂರು : ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು ಬೈಕ್​ನಲ್ಲಿ ಇದ್ದ ನಾಲ್ವರಿಗೆ ಗಂಭೀರ ಗಾಯ ಘಟನೆ ಚಿಕ್ಕಜಾಲದಿಂದ ಏಪೋರ್ಟ್​ ರಸ್ತೆ ಸಂಪರ್ಕಿಸುವ ದಾರಿಯಲ್ಲಿ ನಡೆದಿದೆ.

ಓರ್ವ ಬೈಕ್ ಸವಾರನು ಇಬ್ಬರು ಮಕ್ಕಳು ಹಾಗೂ ಪತ್ನಿಯನ್ನು ಕೂರಿಸಿಕೊಂಡು ಬೈಕ್​ನಲ್ಲಿ ಹೊರಟಿದ್ದ ಸವಾರ. ರಸ್ತೆ ಮಧ್ಯದಲ್ಲಿ ಟ್ರ್ಯಾಕ್​ನಿಂದ ಬಲಗಡೆಗೆ ಬೈಕ್ ಚಲಾಯಿಸಿದ್ದು, ಈ ವೇಳೆ ವೇಗವಾಗಿ ಒಂದು ಕಾರು ತೆರಳುತ್ತಿದ್ದರಿಂದ ಬೈಕ್​ಗೆ ಡಿಕ್ಕಿ ಹೊಡೆದಿದೆ.

ಅಪಘಾತದ ದೃಶ್ಯ ಮತ್ತೊಂದು ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನು ಓದಿ : ಆರೈಕೆ ಸರಿಯಾಗಿ ಮಾಡು ಎಂದಿದ್ದಕ್ಕೆ ಶರ್ಟ್​ ಬಿಚ್ಚಿ ಅನುಚಿತ ವರ್ತನೆ ತೋರಿದ ವೈದ್ಯ!

ಕಾರು ಡಿಕ್ಕಿ ಹೊಡೆದ ರಭಸಕ್ಕೆ ರಸ್ತೆ ಮೇಲೆ ಬಿದ್ದು ಬೈಕ್​ನಲ್ಲಿದ್ದ ಇಬ್ಬರು ಮಕ್ಕಳು ಸೇರಿ ದಂಪತಿಗೆ ಗಂಭೀರ ಗಾಯಗೊಂಡಿದ್ದಾರೆ. ಕೂಡಲೇ ರಸ್ತೆ ಮೇಲೆ ಬಿದ್ದಿದ್ದ ಮಕ್ಕಳನ್ನ ರಕ್ಷಿಸಿದ ಇತರ ಸವಾರರು.ಅದೃಷ್ಟವಶಾತ್ ಮಕ್ಕಳು ಮತ್ತು ಪೋಷಕರು ಪ್ರಾಣಾಪಾಯದಿಂದ ಪರಾಗಿದ್ದು, ಈ ಘಟನೆ ಬಗ್ಗೆ ಚಿಕ್ಕಜಾಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES