Thursday, January 23, 2025

ಬೆಂಗಳೂರು ಪೊಲೀಸರನ್ನು ಖುಷಿ ಪಡಿಸಿದ ಕಿಂಗ್ ಕೊಹ್ಲಿ

ಬೆಂಗಳೂರು : ಯೋ ಯೋ ಟೆಸ್ಟ್ ಹಿನ್ನೆಲೆ ಬೆಂಗಳೂರಿಗೆ ಬಂದಿದ್ದ ಕಿಂಗ್ ಕೊಹ್ಲಿ ನಗರದ ಪೋಲಿಸರಿಗೆ ಗ್ರೂಫ್ ಪೋಟೊ ನೀಡಿ ಫುಲ್ ಖುಷಿ ಪಡಿಸಿದ್ದಾರೆ.

ಕೆಲ ಮುಂದಿನ ದಿನಗಳಲ್ಲಿ ಏಷ್ಯಾ ಕಪ್ ಪಂದ್ಯ ಇರುವ ಹಿನ್ನೆಲೆ ಇಂದು ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್​​ಮನ್ ವಿರಾಟ್ ಅವರು ಫಿಟ್ನೆಸ್ ಟೆಸ್ಟ್​ಗೆ ಒಳಪಡಲೆಂದು ಬೆಂಗಳೂರಿಗೆ ಬಂದಿದ್ದರು. ಈ ವೇಳೆ ನಗರದ ಪೋಲಿಸ್ ಅಧಿಕಾರಿಗಳು ವಿರಾಟ್ ಅವರನ್ನು ಕಂಡು ಸಂತಸಪಟ್ಟಿದ್ದು, ಬಳಿಕ ಅಧಿಕಾರಿಗಳು ವಿರಾಟ್ ಅವರ ಬಳಿ ಒಂದು ಸೆಲ್ಫಿ ತೆಗೆದುಕೊಳ್ಳಲು ಮನವಿ ಮಾಡಿಕೊಂಡಿದ್ದಾರೆ.

ಇದನ್ನು ಓದಿ : ಮೋದಿ ವೀಕ್ಷಣೆಗೆ ಜನಸಾಮಾನ್ಯರಂತೆ ರಸ್ತೆಪಕ್ಕದಲ್ಲಿ ನಿಂತ ರಾಜ್ಯ ಬಿಜೆಪಿ ನಾಯಕರು!

ಪೋಲಿಸರ ಮನವಿಗೆ ಆಗಲ್ಲ ಎನ್ನದೆ, ವಿರಾಟ್ ಕೊಹ್ಲಿ ಅಧಿಕಾರಿಗಳ ಗ್ರೂಫ್ ಪೋಟೋಗೆ ಸಾಥ್ ನೀಡಿ, ನಗರದ ಪೊಲೀಸ್ ಅಧಿಕಾರಿಗಳನ್ನು ಫುಲ್ ಖುಷ್ ಪಡಿಸಿದ್ದಾರೆ. ಇದರಿಂದ ತುಂಬಾ ಸಂತೋಷವನ್ನು ವ್ಯಕ್ತಪಡಿಸಿ, ರನ್ ಮಷಿನ್ ಅವರ ಸರಳತೆ ಕಂಡು ಸೆಲ್ಯೂಟ್ ಮಾಡಿದ ಅಧಿಕಾರಿಗಳು.

ಯೋ ಯೋ ಟೆಸ್ಟ್​ ಪರೀಕ್ಷೆಯಲ್ಲಿ ಜಸ್ಟ್ ಪಾಸ್ ಆಗಿರುವ ವಿರಾಟ್ ಕೊಹ್ಲಿ. ಏಷ್ಯಾ ಕಪ್ ಪಂದ್ಯದ ಹಿನ್ನಲೆ ಕೊಹ್ಲಿ ಮೇಲೆ ಅಭಿಮಾನಿಗಳು ಭಾರೀ ನಿರೀಕ್ಷೆ ಇಟ್ಟಿದ್ದು, ಮುಂದಿನ ಏಷ್ಯಾ ಕಪ್​​ ಪಂದ್ಯಗಳನ್ನು ಆಡಲು ಸಜ್ಜಾಗಿರುವ ಕಿಂಗ್ ಕೊಹ್ಲಿ.

RELATED ARTICLES

Related Articles

TRENDING ARTICLES