Saturday, January 11, 2025

ಯುವತಿಗೆ ಬಹಿರಂಗವಾಗಿ ಕ್ಷಮೇ ಕೇಳಿದ ನಿರ್ದೇಶಕ ರಾಜ್​ ಬಿ ಶೆಟ್ಟಿ 

ಬೆಂಗಳೂರು :  ಟೋಬಿ ಸಿನಿಮಾ ವೀಕ್ಷಿಸಿದ ಯುವತಿಯೊಬ್ಬರು ಸಿನಿಮಾ ಚೆನ್ನಾಗಿಲ್ಲ ಎಂದ ಕಾರಣಕ್ಕೆ ಅಪರಿಚಿತ ಯುವಕನೋರ್ವ ದಬ್ಬಾಳಿಕೆ ನಡೆಸಿರುವ ಘಟನೆ ಇಂದು ಬೆಳಗ್ಗೆ ಮೈಸೂರಿನ ಸಂಗಮ್​ ಚಿತ್ರಮಂದಿರದ ಬಳಿ ನಡೆದಿದೆ.

ಇನ್ನೂ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ನಟ ಕಮ್​ ನಿರ್ದೇಶಕ ರಾಜ್ ಬಿ ಶೆಟ್ಟಿ ಕ್ಷಮಾಪಣೆ ಕೇಳಿದ್ದಾರೆ.

ಈ ಸಂಬಂಧ ಪವರ್​ ಟಿವಿ ಜೊತೆ ಮಾತನಾಡಿದ ಅವರು, ನೋಡುಗರು ಸಿನಿಮಾ ಚನ್ನಾಗಿದೆ ಅಥವಾ ಚನ್ನಾಗಿಲ್ಲ ಎಂದು ಹೇಳುವ ಹಕ್ಕನ್ನು ಪಡೆದುಕೊಂಡಿರುತ್ತಾನೆ, ಅದು ಅವರ ವೈಯಕ್ತಿಕ ವಿಚಾರ, ಅದನ್ನು ನಾನು ಗೌರವಿಸುತ್ತೇನೆ. ನಾವು ಸಿನಿಮಾ ಮಾಡಲು ವರ್ಷಗಟ್ಟಲೆ ಸಮಯ ತೆಗೆದುಕೊಂಡಿರಬಹುದು. ನೋಡುಗರು ಸಿನಿಮಾ ಬಗ್ಗೆ ಪ್ರತಿಕ್ರಿಯೆ ನೀಡುವುದು ಅವರ ವೈಯಕ್ತಿಕ ವಿಚಾರ.

ಈ ಘಟನೆಯಲ್ಲಿರುವ ವ್ಯಕ್ತಿಯೊಂದಿಗೆ ನಮಗಾಗಲಿ ಅಥವಾ ನಮ್ಮ ಚಿತ್ರ ತಂಡಕ್ಕಾಗಲಿ ಸಂಬಂಧವಿಲ್ಲ,  ಈ ತಪ್ಪು ಯಾರೇ ಮಾಡಿದ್ದರು ಅದು ತಪ್ಪೇ, ಆದರೂ ನಾನು ಯಾಕೆ ಈ ವಿಚಾರದಲ್ಲಿ ಕ್ಷಮೇ ಕೋರುತ್ತಿದೇನೆ ಎಂದರೇ, ಈ ಘಟನೆಯಲ್ಲಿರುವ ವ್ಯಕ್ತಿಗಳು ಕನ್ನಡ ಸಿನಿಮಾವನ್ನು ಬೆಂಬಲಿಸುವವರೆ ಆದರೇ ಅವರಿಗೆ ಗೊತ್ತಾಗಬೇಕು ಇಂಥಾ ವಿಷಯಗಳನ್ನು ನಾವು ಸಪೋರ್ಟ್​ ಮಾಡುವುದಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ನೀಡುವ ಉದ್ದೇಶದಿಂದ ಕ್ಷಮೇ ಕೇಳುತ್ತಿದ್ದೇನೆ ಎಂದು ಅವರು ಹೇಳಿದರು.

ಸಿನಿಮಾ ನೋಡಿದವರು ಚನ್ನಾಗಿದೆ ಅಥವಾ ಚನ್ನಾಗಿಲ್ಲ ಎಂದು ಹೇಳಿದಾಗ ಅದನ್ನು ಗೌರವದಿಂದ ಸ್ವೀಕರಿಸುತ್ತೇನೆ, ಈ ಘಟನೆಯಲ್ಲಿ ಯುವತಿಗೆ ಮತ್ತೊಮ್ಮೆ ಕ್ಷಮೆ ಕೇಳುತ್ತೇನೆ ಎನ್ನುವ ಮೂಲಕ ಈ ಘಟನೆ ಗೊಂದಲಕ್ಕೆ ತೆರೆ ಎಳೆದರು.

RELATED ARTICLES

Related Articles

TRENDING ARTICLES