Wednesday, September 3, 2025
HomeUncategorizedಎರಡು ಬೈಕ್ ಗಳ ನಡುವೆ ಡಿಕ್ಕಿ ; ಓರ್ವ ಸವಾರ ಸಾವು

ಎರಡು ಬೈಕ್ ಗಳ ನಡುವೆ ಡಿಕ್ಕಿ ; ಓರ್ವ ಸವಾರ ಸಾವು

ಮೈಸೂರು : ಚಲಿಸುತ್ತಿದ್ದ ಎರಡು ಬೈಕ್​ಗಳ ನಡುವರ ಭೀಕರ ಅಪಘಾತ ಓರ್ವ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಘಟನೆ ನರಸೀಪುರ ತಾಲೂಕಿನ ಕುರುಬೂರು ಗ್ರಾಮದ ಬಳಿ ನಡೆದಿದೆ.

ಕುರುಬೂರು ಗ್ರಾಮದ ನಾಗರಾಜು (80) ಮೃತ ದುರ್ದೈವಿ. ಎಂಬಾತ ಮತ್ತು ಮತ್ತೊಬ್ಬ ವ್ಯಕ್ತಿ ಬೈಕ್​ನಲ್ಲಿ ಬರುತ್ತಿರುವ ವೇಳೆ ಎರಡು ಬೈಕ್​ಗಳ ನಡುವೆ ಡಿಕ್ಕಿಯಾಗಿ ನಾಗರಾಜು ಎಂಬುವವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಇದನ್ನು ಓದಿ : ಬೆಂಗಳೂರು ಪೊಲೀಸರನ್ನು ಖುಷಿ ಪಡಿಸಿದ ಕಿಂಗ್ ಕೊಹ್ಲಿ

ಈ ಹಿಂದೆ ಅದೇ ಜಾಗದಲ್ಲಿ ಕಾರ್ ಮತ್ತು ಬಸ್ ನಡುವೆ ಅಪಘಾತಗೊಂಡು 10 ಜನ ಮೃತಪಟ್ಟಿದ್ದರು. ಈ ಬಗ್ಗೆ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿಕೊಂಡಿದ್ದರು ಪ್ರಯೋಜನ ಆಗಿರಲಿಲ್ಲ. ಈ ಹಿನ್ನೆಲೆ ಘಟನೆಯನ್ನು ಖಂಡಿಸಿ ನಡು ರಸ್ತೆಯಲ್ಲಿ ನಾಗರಾಜು ಅವರ ಮೃತದೇಹ ಇಟ್ಟು ಪ್ರತಿಭಟನೆ ಮಾಡುತ್ತಿರುವ ಗ್ರಾಮಸ್ಥರು.

ಕುರುಬೂರು ಗ್ರಾಮದ ಬಳಿ ಸಾಕಷ್ಟು ಅಪಘಾತವಾಗುತ್ತಿದ್ದು, ಮೈಸೂರು ಚಾಮರಾಜನಗರ ಮುಖ್ಯ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ಮಾಡುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments