Friday, January 3, 2025

ಕೆಲವೇ ದಿನಗಳಲ್ಲಿ ಕಾವೇರಿ ನಿವಾಸಕ್ಕೆ ಸಿಎಂ ಶಿಫ್ಟ್​!

ಬೆಂಗಳೂರು : ಅತಿ ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾವೇರಿ ನಿವಾಸಕ್ಕೆ ಶಿಫ್ಟ್​ ಆಗವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಕಳೆದ ಎರಡು ತಿಂಗಳಿಂದ ಕಾವೇರಿ ನಿವಾಸದ ನವೀಕರಣ ಕಾಮಗಾರಿ ನಡೆಯುತಿತ್ತು, ಇದೀಗ ಕಾವೇರಿ ನಿವಾಸದ ನವೀಕರಣ ಕೆಲಸ‌ ಮುಗಿದ ಹಿನ್ನೆಲೆ ಸಿಎಂ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಕಳೆದ ಎರಡು ಮೂರು ತಿಂಗಳಿಂಗ ಆಗಿರುವ ಸಂಪೂರ್ಣ ಕಾಮಗಾರಿ ಪ್ರಗತಿಯನ್ನು ಇಂದು ಸಿಎಂ ಪರಿಶೀಲನೆ ನಡೆಸಿದ್ದು ಸೆಪ್ಟೆಂಬರ್​ 1 ರಂದು ನವೀಕರಣಗೊಂಡಿರುವ ನೂತನ ಕಾವೇರಿ ನಿವಾಸಕ್ಕೆ ಶಿಫ್ಟ್​ ಆಗುವ ಎಲ್ಲಾ ಸಾಧ್ಯತೆ ಇವೆ ಎಂದು ಮೂಲಗಳು ಹೇಳಿದೆ.

ಇದನ್ನೂ ಓದಿ: ಮೋದಿ ವೀಕ್ಷಣೆಗೆ ಜನಸಾಮಾನ್ಯರಂತೆ ರಸ್ತೆಪಕ್ಕದಲ್ಲಿ ನಿಂತ ರಾಜ್ಯ ಬಿಜೆಪಿ ನಾಯಕರು!

ಕಳೆದ ಬಾರಿ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಸಿದ್ದರಾಮಯ್ಯ ಇದೇ ಕಾವೇರಿ ನಿವಾಸದಲ್ಲಿ ವಾಸವಿದ್ದರು ಇದೀಗ ಮತ್ತೆ ಕಾಂಗ್ರೆಸ್​ ಪಕ್ಷ ಅಧಿಕಾರಕ್ಕೆ ಬಂದಿದ್ದು ಮುಖ್ಯಮಂತ್ರಿಗಳಾಗಿ ಮುಂದುವರೆದಿದ್ದಾರೆ ಈ ಹಿನ್ನೆಲೆಯಲ್ಲಿ ತಮ್ಮ ನೆಚ್ಚಿನ ಕಾವೇರಿ ನಿವಾಸಕ್ಕೆ ಸೆಪ್ಟೆಂಬರ್​ 1 ರಂದು ಶಿಫ್ಟ್​ ಆಗುವ ಎಲ್ಲಾ ಲಕ್ಷಣಗಳು ಕಂಡುಬಂದಿದೆ.

RELATED ARTICLES

Related Articles

TRENDING ARTICLES