Sunday, January 19, 2025

ಬೈಕ್​ ವೀಲ್ಹಿಂಗ್​: ಪಿಎಸ್​ಐ ಪುತ್ರನ ಬಂಧಸಿದ ಪೊಲೀಸರು!

ಮೈಸೂರು : ರಸ್ತೆಯಲ್ಲಿ ಬೈಕ್​ ವೀಲಿಂಗ್ ಮಾಡುತ್ತಾ ಜನರಿಗೆ ಕಿರಿಕಿರಿ ಉಂಟುಮಾಡುತ್ತಿದ್ದ ಪಿಎಸ್ಐ ಪುತ್ರನನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಸಿದ್ದಾರ್ಥ ನಗರ ಪೊಲೀಸ್​ ಠಾಣಾವ್ಯಾಪ್ತಿಯಲ್ಲಿ ನಡೆದಿದೆ.

ಸೈಯ್ಯಾದ್ ಐಮಾನ್ ವೀಲ್ಹಿಂಗ್ ಮಾಡಿ ಪುಡಾಂಟ ನಡೆಸುತ್ತಿದ್ದ ಪಿಎಸ್ಐ ಪುತ್ರ. ನಗರದ ರಿಂಗ್ ರಸ್ತೆ ಹಾಗೂ ರಾಜೀವ್ ನಗರದಲ್ಲಿ ವೀಲ್ಲಿಂಗ್ ಮಾಡಿ ಆ ವೀಲ್ಹಿಂಗ್​​ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಮಾಡುತ್ತಿದ್ದ.

ಇದನ್ನು ಓದಿ: ಮೋದಿ ವೀಕ್ಷಣೆಗೆ ಜನಸಾಮಾನ್ಯರಂತೆ ರಸ್ತೆಪಕ್ಕದಲ್ಲಿ ನಿಂತ ರಾಜ್ಯ ಬಿಜೆಪಿ ನಾಯಕರು!

ಈ ಕುರಿತು ಸಾರ್ವಜನಿಕರಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು, ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವೀಡಿಯೋಗಳನ್ನು ಆಧಾರಿಸಿ ಕಾರ್ಯಾಚರಣೆ ನಡೆಸಿದ ಸಿದ್ದಾರ್ಥ ಸಂಚಾರಿ ಪೊಲೀಸರು ಪಿಎಸ್​ಐ ಪುತ್ರ ಸೈಯ್ಯಾದ್​ ಐಮಾನ್​ ಮತ್ತು ವೀಲ್ಹಿಂಗ್​ ಗೆ ಬಳಸಿದ್ದ ಬೈಕನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸದ್ದಾರೆ.

ಸಿದ್ದಾರ್ಥ ಸಂಚಾರಿ ಪೊಲೀಸ್​ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

RELATED ARTICLES

Related Articles

TRENDING ARTICLES