Saturday, January 11, 2025

ಬಾವಿಗೆ ಬಿದ್ದು 3 ವರ್ಷದ ಮಗು ಸಾವು

ಕಾರವಾರ : ಆಟವಾಡುತ್ತಿದ್ದ ವೇಳೆ ಮನೆಯ ಬಳಿಯಿರುವ ಬಾವಿಯಲ್ಲಿ ಬಿದ್ದು ಮಗು ಸಾವನ್ನಪ್ಪಿರುವ ಘಟನೆ ಹರಿದೇವ ನಗರದಲ್ಲಿ ನಡೆದಿದೆ.

ಸ್ಥುಥಿ (3) ಮೃತಪಟ್ಟ ಮಗು. ಮನೆಯ ಹೊರಗೆ ಆಟವಾಡುತ್ತಿದ್ದ ಮಗು. ಈ ವೇಳೆ ಗಣಪತಿ ಮೂರ್ತಿ ಅಂದುಕೊಂಡು ಕೆಳಗೆ ಬಿದ್ದಿದ್ದ ಮಣ್ಣನ್ನು, ಮನೆಯ ಪಕ್ಕದಲ್ಲಿದ್ದ ಬಾವಿಯೊಂದರಲ್ಲಿ ಹಾಕಲು ಹೋಗಿ ಕಾಲು ಜಾರಿ ಬಿದ್ದಿದೆ.

ಆ ಸಮಯದಲ್ಲಿ ಯಾರು ಇಲ್ಲದ ಪರಿಣಾಮ ಮಗು ನೀರಲ್ಲಿ ಮುಳಗಿ ಸಾವನ್ನಪ್ಪಿದೆ.

ಇದನ್ನು ಓದಿ : ಯುವತಿಗೆ ಬಹಿರಂಗವಾಗಿ ಕ್ಷಮೇ ಕೇಳಿದ ನಿರ್ದೇಶಕ ರಾಜ್​ ಬಿ ಶೆಟ್ಟಿ

ಬಳಿಕ ಮಗು ಕಾಣದೆ ಇದ್ದಾಗ ಪೋಷಕರು ಮಗು ನಾಪತ್ತೆಯಾಗಿದೆ ಎಂದು ಹುಡುಕಾಟ ನಡೆಸಿದರು. ಬಡವಾಣೆ ನಿವಾಸಿಗಳೆಲ್ಲ ಹುಡುಕಾಡಿದಾಗ ಮಗುವಿನ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ. ಕಾರವಾರ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES