Wednesday, January 22, 2025

ಹೊಲೆಯ, ಮಾದಿಗ ಅಂತ ನಾವೇ ಕರೆದುಕೊಳ್ತೀವಿ : ಸಚಿವ ಮಹದೇವಪ್ಪ

ಬೆಂಗಳೂರು : ಹೊಲೆಯ, ಮಾದಿಗ ಅಂತ ನಾವೇ ಕರೆದುಕೊಳ್ತೀವಿ. ಅಮೇಲೆ ಅವರು ಅಂದರು, ಇವರು ಅಂದ್ರು ಅಂತ ಮಾತಾಡ್ತೀವಿ ಎಂದು ಸಚಿವ ಡಾ.ಹೆಚ್.ಸಿ ಮಹದೇವಪ್ಪ ಹೇಳಿದರು.

ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಹೊಲಯ, ಮಾದಿಗ ಅನ್ನೋದು ಅಸಂವಿಧಾನಿಕ. ಬೇರೆ ಅವರು ಅಂದರೆ ನಾವು ಕೇಸ್ ಹಾಕ್ತೀವಿ. ನಾವೇ ಹೊಲೆಯ ಮಾದಿಗ ಅನ್ನೋದಕ್ಕೆ ನಮ್ಮಲ್ಲೇ ಹೇಳಲು‌‌ ಅವಕಾಶ ಕೊಡಬೇಡಿ ಎಂದರು.

ರೈಟ್, ‌ಲೆಫ್ಟ್ ಅಂತ ಭಿನ್ನಾಭಿಪ್ರಾಯ ನಮ್ಮಲ್ಲಿ ಇರಬಾರದು. ನಾವು ಎಲ್ಲರೂ ಒಗ್ಗಟ್ಟಾಗಿರಬೇಕು. ದಲಿತರು ನಾವು ಭಾರತದ ಮೂಲ ನಿವಾಸಿಗಳು. ಸಿದ್ದಲಿಂಗಯ್ಯ ಅವರ ಹೋರಾಟವನ್ನು ಸ್ಮರಣೆ ಮಾಡಿಕೊಳ್ಳೋಣ ಎಂದು ತಿಳಿಸಿದರು.

ಮಾಜಿ ಸಚಿವ ಹೆಚ್. ಆಂಜನೇಯ ಅವರು ಬೇಡಿಕೆ ಇಟ್ಟಿದ್ದಾರೆ. ಸಿಎಂ‌ ಜೊತೆ ಚರ್ಚೆ ಮಾಡುತ್ತೇವೆ. ಅದಕ್ಕಾಗಿ ಐದು ಎಕರೆ ಜಮೀನಿ ಮೀಸಲಿಡೋಣ. ಅವರ ಭಾಷಣ, ಹೋರಾಟ, ಎಲ್ಲಾ ವಸ್ತುಗಳನ್ನು ಪ್ರದರ್ಶನಕ್ಕೆ ಇಡೋಣ. ಚಳುವಳಿಯ ಹೋರಾಟಗಾರ ಸಿದ್ದಲಿಂಗಯ್ಯ ಅವರ ನೆನಪಿಡೋಣ ಎಂದು ಮಹದೇವಪ್ಪ ಕರೆ ನೀಡಿದರು.

RELATED ARTICLES

Related Articles

TRENDING ARTICLES