Tuesday, January 7, 2025

ವರಮಹಾಲಕ್ಷ್ಮಿ ಸಂಭ್ರಮ : ಚಾಮುಂಡಿ ಬೆಟ್ಟದಲ್ಲಿ ಮಹಿಳಾ ಭಕ್ತರಿಗೆ ಅರಿಶಿಣ ಕುಂಕುಮ ವಿತರಣೆ

ಮೈಸೂರು : ನಾಡಿನಾದ್ಯಂತ ಸಡಗರ ಸಂಭ್ರಮದಿಂದ ವರಮಹಾಲಕ್ಷ್ಮೀ ಹಬ್ಬ ಆಚರಣೆ ಮಾಡಲಾಗುತ್ತಿದ್ದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯುತ್ತಿದೆ.

ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಮಹಿಳೆಯರಿಗೆ ದೇವಾಲಯದ ವತಿಯಿಂದ ಅರಿಶಿನ, ಕುಂಕಮ ಹಾಗೂ ಬಳೆ ವಿತರಣೆ ಮಾಡಲಾಗುತ್ತಿದೆ.

ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬ: ಗೊರವನಹಳ್ಳಿ ಲಕ್ಷ್ಮಿ ದೇವಿ ದರ್ಶನಕ್ಕೆ ಬಂದ ಜನಸಾಗರ!

ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕರಾದ ಶಶಿಶೇಖರ್ ದೀಕ್ಷಿತ್ ಅವರಿಂದ ವಿತರಣೆ ಮಹಿಳಾ ಭಕ್ತಾಧಿಗಳಿಗೆ ಅರಿಶಿನ – ಕುಂಕುಮ ಹಾಗೂ ಬಳೆ ವಿತರಣೆ ಮಾಡಿದರು. ಈ ವೇಳೆ ಸರತಿ ಸಾಲಿನಲ್ಲಿ ನಿಂತು ಅರಿಶಿನ, ಕುಂಕುಮ ಹಾಗೂ ಬಳೆ ಸ್ವೀಕರಿಸಿ ದೇವರ ಪ್ರದರ್ಶನ ಪಡದ ಭಕ್ತಾದಿಗಳು.

RELATED ARTICLES

Related Articles

TRENDING ARTICLES