Thursday, July 4, 2024

ಕಾವೇರಿ ನೀರು ವಿಚಾರಣೆ ಸೆಪ್ಟೆಂಬರ್​ 1ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್​

ನವದೆಹಲಿ : ಕಾವೇರಿ ನದಿ ನೀರು ಹಂಚಿಕೆ ವಿಚಾರಣೆಯನ್ನು ಸುಪ್ರೀಂ ಕೊರ್ಟ್​ ಸೆಪ್ಟೆಂಬರ್‌ 1ಕ್ಕೆ ಮುಂದೂಡಿದೆ.

ಕಾವೇರಿ ನೀರು ಹಂಚಿಕೆ ಕುರಿತು ಇಂದು ಸುಪ್ರೀಂ ಕೋರ್ಟ್​ ನಲ್ಲಿ ವಾದ-ಪ್ರತಿವಾದ ಆಲಿಸಿದ ಪೀಠ, ನದಿ ನೀರು ಹಂಚಿಕೆ ಸಮಗ್ರ ವರದಿ ಸಲ್ಲಿಸಲು ಪ್ರಾಧಿಕಾರಕ್ಕೆ ಸೂಚನೆ ನೀಡಿ (ಸೆಪ್ಟೆಂಬರ್​ 1) ಶುಕ್ರವಾರಕ್ಕೆ ವಿಚಾರಣೆಯನ್ನು ಮುಂದೂಡಿತು.

ತಮಿಳುನಾಡು ವಾದವೇನು?

ತಮಿಳುನಾಡ ಪರ ವಾದ ಮಂಡಿಸಿದ ವಕೀಲ ಮುಕುಲ್​ ರೋಹ್ಟಗಿ, ಕಾವೇರಿ ಪ್ರಾಧಿಕಾರ ಆದೇಶದ ಪ್ರಕಾರ ಹರಿಸಬೇಕಾದ ನೀರನ್ನು ಕರ್ನಾಟಕ ಹರಿಸುತ್ತಿಲ್ಲ, ನಮಗೆ 47% ನೀರಿನ ಕೊರತೆ ಎದುರಾಗಿದೆ. ಆದರೇ, ಕರ್ನಾಟಕ 40 ಟಿಎಂಸಿ ನೀರು ಕೂಡ ಬಿಡ್ತಿಲ್ಲ ಎಂದು ತಮ್ಮ ವಾದವನ್ನು ಮಂಡಿಸಿತು.

ಕರ್ನಾಟಕದ ವಾದವೇನು? 

ಕರ್ನಾಟಕದ ಪರ ಹಿರಿಯ ವಕೀಲ ಮೋಹನ್ ಕಾತರಕಿ ತಮ್ಮ ವಾದ ಮಂಡಿಸಿ, ಈ ಬಾರಿ ರಾಜ್ಯದಲ್ಲಿ ಆಗಬೇಕಾದ ವಾಡಿಕೆ ಮಳೆಯ ಬೀಳದೇ, ರೈತರು ಸಂಕಷ್ಟದಲ್ಲಿದ್ದಾರೆ. ಮಳೆ ಕೊರತೆ ನಡುವೆಯೂ ತಮಿಳುನಾಡಿಗೆ ನಿರನ್ನು ಇಂದಿನವರೆಗೂ ಹರಿಸಲಾಗುತ್ತಿದೆ.

ಈ ಬಾರಿ ಕರ್ನಾಟಕದಲ್ಲಿ ನೀರಿನ ಸಮಸ್ಯೆ ಹೆಚ್ಚಿದೆ ರಾಜ್ಯದಲ್ಲಿ ರೈತರು ಸಂಕಷ್ಟ ಎದುರಿಸುತ್ತಿದ್ದು ಬೆಳೆ ಇಳುವರಿಯಲ್ಲಿಯೂ ಕುಂಠಿತವಾಗಿದೆ ಎಂದು ಸುಪ್ರೀಂಕೋರ್ಟ್‌ನಲ್ಲಿ ವಕೀಲರು ವಾದ ಮಂಡಿಸಿದ್ದಾರೆ.

ಸುಪ್ರೀಂಕೋರ್ಟ್ ಹೇಳಿದ್ದೇನು?

ಎರಡು ರಾಜ್ಯಗಳ ಪರ ವಿರೋಧದ  ವಾದ-ವಿವಾದಗಳನ್ನು ಆಲಿಸಿದ ಪೀಠ, ಕಾವೇರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಏಕೆ ಮಾತುಕತೆ ನಡೆಸುವುದಿಲ್ಲ ನೀವು? ಎಂದು ಪ್ರಶ್ನಿಸಿತು.  ಕಾವೇರಿ ನೀರಿನ ವಿಚಾರವಾಗಿ ತನಿಖೆ ಮಾಡದೆ ಆದೇಶ ಹೊರಡಿಸಲು ಸಾಧ್ಯವಿಲ್ಲ ಎಂದು ಮುಂದಿನ ವಿಚಾರಣೆಯನ್ನು  ಸೆಪ್ಟೆಂಬರ್ 1ಕ್ಕೆ ಮುಂದೂಡಿ ಕೋರ್ಟ್​ ಆದೇಶಿಸಿತು.

RELATED ARTICLES

Related Articles

TRENDING ARTICLES