Monday, January 20, 2025

ನಾಳೆ ನಗರದಲ್ಲಿ ಮೋದಿ ರೋಡ್​ ಶೋ ರದ್ದು!

ಬೆಂಗಳೂರು : ನಾಳೆ ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿಯವರ ಪೂರ್ವ ನಿಯೋಜಿತ ರೋಡ್​ ಶೋ ರದ್ದಾಗಿದೆ ಎಂದು ಮೂಲಗಳು ತಿಳಿಸಿದೆ.

ಚಂದ್ರಯಾನ 3 ಯಶಸ್ವಿ ಉಡಾವಣೆ ಮತ್ತು ಸೇಫ್ಟಿ ಲ್ಯಾಂಡಿಗ್​ ಮಾಡುವ ಮೂಲಕ ಜಗತ್ತೆ ಭಾರತದತ್ತ ತಿರುಗಿ ನೋಡುವಂತೆ ಮಾಡಿದ ಭಾರತದ ವಿಜ್ಞಾನಿಗಳ ಸಾಧನೆಯನ್ನು ಶ್ಲಾಘಿಸಿಸಲು ನಾಳೆ ಬೆಂಗಳೂರಿನ ಇಸ್ರೋ ನಿಯಂತ್ರಣಾ ಕೇಂದ್ರಕ್ಕೆ ಆಗಮಿಸಲಿದ್ದಾರೆ. ಈ ವೇಳೆ ನಗರದಲ್ಲಿ ಒಂದು ಗಂಟೆಗಳ ಕಾಲ ಮೋದಿ ರೋಡ್​ ಶೋ ನಡೆಸಲಿ ತೀರ್ಮಾನಿಸಲಾಗಿತ್ತು.

ಇದನ್ನು ಓದಿ; ನಾಳೆ ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಮೋದಿ ಆಗಮನ!

ಆದರೇ, ನಾಳೆ ಬೆಂಗಳೂರಿಗೆ ಆಗಮಿಸಲಿರುವ ಪ್ರಧಾನಿ ಮೋದಿ ರೋಡ್ ಶೋ ರದ್ದಾಗಿದ್ದು ನೇರವಾಗಿ ಇಸ್ರೋ ಕೇಂದ್ರಕ್ಕೆ ಆಗಮಿಸಲಿದ್ದಾರೆ, ಈ ವೇಳೇ ರೋಡ್​ ಶೋ ಬದಲಿಗೆ ಎಚ್.ಎ.ಎಲ್ ನಿಂದ ಆಗಮಿಸುವ ಮಾರ್ಗ ಮದ್ಯೆ ಕಾರಿನ ಮೂಲಕವೇ  ರಸ್ತೆ ಅಕ್ಕಪಕ್ಕ ಸೆರುವ ಜನರತ್ತ ಮೋದಿ ಕೈ ಬೀಸಲಿ ಎಂದು ಮೂಲಗಳು ತಿಳಸಿದ್ದಾರೆ.

RELATED ARTICLES

Related Articles

TRENDING ARTICLES