Sunday, December 29, 2024

ಎಣ್ಣೆ ಚಟ ಬಿಡಿಸಲು ಕರೆದೊಯ್ದು ವ್ಯಕ್ತಿಯ ಹತ್ಯೆ

ಹಾಸನ : ಮದ್ಯದ ಚಟ ಬಿಡಿಸಲು ವ್ಯಕ್ತಿಯೋರ್ವನನ್ನು ಕರೆದೊಯ್ದು ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ತೀವ್ರ ಅಸ್ವಸ್ಥಗೊಂಡ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ.

ಹಾಸನ ತಾಲೂಕಿನ ದೊಡ್ಡಮೇದೂರು ಗ್ರಾಮದ ಪದ್ಮೇಗೌಡ ಮೃತ ವ್ಯಕ್ತಿ. ಹಾಸನದ ವಿಜಯನಗರದಲ್ಲಿರುವ ಮದ್ಯದ ಚಟ ಬಿಡಿಸುವ ಪುನರ್ ಜೀವನ ವಸತಿ ಕೇಂದ್ರದಲ್ಲಿ ಪದ್ಮೇಗೌಡನನ್ನು ದಾಖಲಿಸಲಾಗಿತ್ತು. ಆದರೆ, ಈತನ ಮೇಲೆ ಅಲ್ಲಿನ ಸಿಬ್ಬಂದಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಬಳಿಕ ತೀವ್ರ ಸುಸ್ತಿನಿಂದ ಬಳಲುತ್ತಿದ್ದ ಪದ್ಮೇಗೌಡನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಪದ್ಮೇಗೌಡ ಸಾವನಪ್ಪಿದ್ದಾನೆ. ಶವ ಸಂಸ್ಕಾರ ಮಾಡುವ ವೇಳೆ ಮೃತ ವ್ಯಕ್ತಿಯ ಮೈಮೇಲೆ ಗಾಯದ ಗುರುತುಗಳು ಪತ್ತೆಯಾಗಿವೆ. ಪದ್ಮೇಗೌಡನ ಮೇಲೆ‌ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆಂದು ಮೃತನ ಪೋಷಕರ ಆರೋಪ ಹಾನಸ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

RELATED ARTICLES

Related Articles

TRENDING ARTICLES