ಬೆಂಗಳೂರು : ವರಲಕ್ಷ್ಮೀ ಭಕ್ತರು ಬೇಡಿದ ವರಗಳನ್ನು ನೀಡುತ್ತಾಳೆ. ತನ್ನ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾಳೆ ಎಂಬ ನಂಬಿಕೆಯಿದೆ. ಹೀಗಾಗಿಯೇ, ದೇವಿಯ ಈ ರೂಪವನ್ನು ವರ ಮತ್ತು ಲಕ್ಷ್ಮೀ ಅಂತ ಕರೆಯಲಾಗುತ್ತದೆ.
ಈ ಬಾರಿ ಅಂದರೆ 2023ರ ವರಮಹಾಲಕ್ಷ್ಮೀ ವ್ರತವನ್ನು ಆಗಸ್ಟ್ 25ರಂದು ಶುಕ್ರವಾರ ಆಚರಿಸಲಾಗುವುದು. ವರಲಕ್ಷ್ಮೀ ವ್ರತ, ಶುಭ ಮುಹೂರ್ತ, ಮಹತ್ವ ಹಾಗೂ ಪೂಜಾ ವಿಧಾನಗಳ ಬಗ್ಗೆ ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಪವರ್ ಟಿವಿಗೆ ಮಾಹಿತಿ ನೀಡಿದ್ದಾರೆ.
ಯಾವ ಸಮಯದಲ್ಲಿ ಪೂಜೆ ಮಾಡಬೇಕು?
ಪೂಜೆಯಲ್ಲಿ ಯಾವ ಸಾಮಗ್ರಿಗಳನ್ನು ಬಳಸಬೇಕು?
ವರಮಹಾಲಕ್ಷ್ಮೀಯ ಅನುಗ್ರಹಕ್ಕೆ ಏನನ್ನು ಮಾಡಬೇಕು?
ಇದನ್ನೂ ಓದಿ : ಸಿಂಹ ವಾಹನ ಗಣೇಶನನ್ನು ಪೂಜಿಸುವುದರಿಂದ ಸಾಲಭಾದೆ ನಿವಾರಣೆ
ವರಮಹಾಲಕ್ಷ್ಮೀ ಪೂಜೆಗೆ ಏನನ್ನು ಮಾಡಬೇಕು?
ಪೂಜೆ ಮುಹೂರ್ತ
ಈ ಬಾರಿ ಅಂದರೆ 2023ರ ವರಮಹಾಲಕ್ಷ್ಮೀ ವ್ರತವನ್ನು ಆಗಸ್ಟ್ 5 ರಂದು ಶುಕ್ರವಾರ ಚರಿಸಲಾಗುವುದು.
- ಮುಂಜಾನೆ 5:00:09 ರಿಂದ ಬೆಳಗ್ಗೆ 7:28:09 ರವರೆಗೆ
- ಸಂಜೆ 5:20:09 ರಿಂದ ರಾತ್ರಿ 8:15:28
ನೈವೇದ್ಯ ಏನನ್ನು ಮಾಡಬೇಕು?
- ಅಕ್ಕಿ ಪಾಯಸ
- ಕೋಸಂಬರಿ
- ಪಾಯಸ
- ಒಬ್ಬಟ್ಟು
- ಲಡ್ಡುಗಳು
- ಚಕ್ಕುಲಿಗಳು
- ತಾಂಬೂಲ
- ದಾಳಿಂಬೆ ಫಲಗಳು
ಮಹಾಲಕ್ಷ್ಮೀಯ ಅನುಗ್ರಹ ಪಡೆದುಕೊಳ್ಳಲು ವರಲಕ್ಷ್ಮೀ ವ್ರತ ಆಚರಿಸಲಾಗುತ್ತದೆ. ಈ ವ್ರತವನ್ನು ಆಚರಣೆಯಿಂದ ಸಿರಿ, ಸಂಪತ್ತು ಮತ್ತು ಸೌಭಾಗ್ಯ ಪಡೆದುಕೊಳ್ಳಬಹುದು ಎಂದು ಶ್ರೀಗಳು ಮಾಹಿತಿ ನಿಡಿದ್ದಾರೆ.