Saturday, September 28, 2024

ಮೋದಿಗೆ ಈ ಹಿರಿಮೆ ಸಲ್ಲುತ್ತದೆ : ಎಂ.ಬಿ ಪಾಟೀಲ್ ಬಣ್ಣನೆ

ವಿಜಯಪುರ : ಚಂದ್ರಯಾನ-3 ಯಶಸ್ಸು ಇಡೀ ಇಸ್ರೋ ತಂಡಕ್ಕೆ, ಪ್ರಧಾನಿ ನರೆಂದ್ರ ಮೋದಿಯವರಿಗೆ ಈ ಹಿರಿಮೆ ಸಲ್ಲುತ್ತದೆ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಚಂದ್ರಯಾನ-3ರ ಯಶಸ್ಸಿಗೆ ಎಲ್ಲಾ ವಿಭಾಗದ ವಿಜ್ಞಾನಿಗಳು ಕಾರಣೀಕರ್ತರಾಗಿದ್ದಾರೆ. ಇಡೀ ರಾಷ್ಟ್ರದ ಜನರು ವಿಜ್ಞಾನಿಗಳಿಗೆ ಅಭಿನಂದಿಸುತ್ತಿದ್ದಾರೆ ಎಂದಿದ್ದಾರೆ.

ಇದು ಭಾರತ ದೇಶಕ್ಕೆ ಹೆಮ್ಮೆಯ ವಿಷಯ. ಚಂದ್ರನ ಅಂಗಳ ತಲುಪಿದ 4 ರಾಷ್ಟ್ರಗಳಲ್ಲಿ ನಾವು ಒಂದಾಗಿದ್ದೇವೆ. ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ನಾವು ವಿಶ್ವದ ಇತರರಿಗಿಂತ ಕಡಿಮೆ ಇಲ್ಲವೆಂದು ನಿರೂಪಿಸಿದೆ. ಚಂದ್ರಯಾನದ ಕುರಿತು ಅತೀ ಹೆಚ್ಚು ವೀಕ್ಷಕರು ವೀಕ್ಷಣೆ ಮಾಡಿದ್ದು, ನಮ್ಮ ದೇಶಕ್ಕೆ ಹೆಮ್ಮೆಯಾಗಿದೆ ಎಂದು ಹೇಳಿದ್ದಾರೆ.

ಮೋದಿ ಸ್ಫೂರ್ತಿ ತುಂಬುತ್ತಿದ್ದಾರೆ

ಚಂದ್ರಯಾನ-3 ಯಶಸ್ಸಿನ ಬಳಿಕ ಇಸ್ರೋ ಕಚೇರಿಗೆ ಪ್ರಧಾನಿ ಮೋದಿ ಭೇಟಿ ವಿಚಾರವಾಗಿ ಮಾತನಾಡಿ, ಸ್ವಾಭಾವಿಕವಾಗಿ ಪ್ರಧಾನಿ ಮೋದಿ ಅವರು ಐತಿಹಾಸಿಕ ಸಾಧನೆಯಾದ ಮೇಲೆ ಭೇಟಿ ನೀಡುತ್ತಿದ್ದಾರೆ. ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸುವ ಕೆಲಸ ಸ್ಪೂರ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ. ತಪ್ಪೇನಿದೆ ಅದರಲ್ಲಿ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್, ಬಿಜೆಪಿ ಅಂದ್ರೆ ತಪ್ಪಾಗುತ್ತೆ

ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಚಂದ್ರಯಾನ-3 ಯಶಸ್ಸನ್ನು ರಾಜಕೀಯ ಲಾಭ ತೆಗೆದುಕೊಳ್ಳಲಿದ್ದಾರೆಯೇ? ಎಂಬ ಸುದ್ದಿಗಾರರ ಪ್ರಶ್ನೆಗೆ, ಸೈನ್ಸ್ ಆ್ಯಂಡ್ ಟೆಕ್ನಾಲಜಿಯೇ ಬೇರೆ ರಾಜಕೀಯವೇ ಬೇರೆ. ಜವಾಹರ ಲಾಲ್ ನೆಹರು, ಅಟಲ್ ಬಿಹಾರಿ ವಾಜಪೇಯಿಂದ ಹಿಡಿದು ಪ್ರಧಾನಿ ಮೋದಿವರೆಗೆ ಎಲ್ಲರೂ ಕೆಲಸ ಮಾಡಿದ್ದಾರೆ. ಅದರಲ್ಲಿ ಕಾಂಗ್ರೆಸ್, ಬಿಜೆಪಿ ಎಂದರೆ ಅದು ತಪ್ಪಾಗುತ್ತದೆ ಎಂದು ಎಂ.ಬಿ ಪಾಟೀಲ್ ವಿಶ್ಲೇಷಿಸಿದ್ದಾರೆ.

RELATED ARTICLES

Related Articles

TRENDING ARTICLES