ಬೆಂಗಳೂರು : ಇಲ್ಲಿಯವರೆಗೂ ಫೋಟೋ ಬಿಡುಗಡೆ ಮಾಡುತ್ತಿದ್ದ ಇಸ್ರೋ ಈಗ ಮೊದಲ ಬಾರಿಗೆ ಚಂದ್ರಯಾನ-3 ವಿಡಿಯೋವನ್ನು ಬಿಡುಗಡೆ ಮಾಡಿದೆ.
ಇಡೀ ವಿಶ್ವವೇ ಕಾಯುತ್ತಿರುವ ವಿಡಿಯೋವನ್ನು ಇಸ್ರೋ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಚಂದ್ರಯಾನ-3 ಲ್ಯಾಂಡರ್ ಚಂದ್ರನ ಮೇಲೆ ಇಳಿಯುತ್ತಿರುವಾಗ ಅದರಲ್ಲಿ ಅಳವಡಿಸಿದ್ದ ಕ್ಯಾಮೆರಾದಲ್ಲಿ ಈ ವಿಡಿಯೋ ಸೆರೆಯಾಗಿದೆ.
ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಕೆಲವು ಕಿಲೋ ಮೀಟರ್ ಮೊದಲು ಈ ವಿಡಿಯೋ ಚಿತ್ರಿಕರಣವಾಗಿದೆ. ಲ್ಯಾಂಡರ್ ಕೆಳಗೆ ಇಳಿಯುವವರೆಗೂ ದೃಶ್ಯ ಸೆರೆಯಾಗಿದೆ. 2 ನಿಮಿಷ 17 ಸೆಕೆಂಡ್ನ ವಿಡಿಯೋ ಇದಾಗಿದೆ.
Here is how the Lander Imager Camera captured the moon's image just prior to touchdown. pic.twitter.com/PseUAxAB6G
— ISRO (@isro) August 24, 2023
ಇದನ್ನೂ ಓದಿ : ಇಸ್ರೋ ಅಧ್ಯಕ್ಷರಿಗೆ ಸೋನಿಯಾ ಗಾಂಧಿ ಪತ್ರ
ಚಂದ್ರಯಾನ-3ಗೆ ದೊಡ್ಡ ಅಪಾಯ?
ಚಂದ್ರನ ಮೇಲೆ ವಸ್ತುಗಳು ಎಲ್ಲಿಂದಲಾದರೂ ಬಂದು ಅಪ್ಪಳಿಸಬಹುದು. ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ಗೆ ಆತಂಕವಿದೆ ಎಂದು ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್ ಹೇಳಿದ್ದಾರೆ. ಕುದ್ರಗ್ರಹ ಅಥವಾ ಇತರ ವಸ್ತುವು ಪ್ರಚಂಡ ವೇಗದಲ್ಲಿ ಹೊಡೆದರೆ, ಲ್ಯಾಂಡರ್ ಹಾಗೂ ರೋವರ್ ಎರಡೂ ನಾಶವಾಗುತ್ತವೆ ಎಂದು ತಿಳಿಸಿದ್ದಾರೆ.