Wednesday, January 22, 2025

ಬಂಧನ ಪ್ರಶ್ನಿಸಿ ಪುನೀತ್​ ಕೆರೆಹಳ್ಳಿ ಹೇಬಿಯಸ್​ ಕಾರ್ಪಸ್ ಅರ್ಜಿ​ : 6 ಪ್ರತಿವಾದಿಗಳಿಗೆ ಹೈಕೋರ್ಟ್​ ನೊಟೀಸ್

ಬೆಂಗಳೂರು : ಗೂಂಡಾ ಕಾಯ್ದೆಯಡಿ ಬಂಧನ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದ ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ ಹೇಬಿಯಸ್​ ಕಾರ್ಪಸ್​ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಸಂಬಂಧಿಸಿ ನಗರ ಪೊಲೀಸ್ ಆಯುಕ್ತರಿಗೆ ನೋಟೀಸ್​ ಜಾರಿಗೊಳಿಸಲು ಹೈಕೋರ್ಟ್​ ಆದೇಶಿಸಿದೆ.

ಪುನೀತ್ ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ನ್ಯಾಯಪೀಠ, ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶ ನೀಡಿದೆ. ಈ ಪ್ರಕರಣದಲ್ಲಿ ನಗರ ಪೊಲೀಸ್ ಕಮೀಷನರ್ ಸೇರಿದಂತೆ 6 ಪ್ರತಿವಾದಿಗಳಿಗೆ ನೋಟಿಸ್ ಜಾರಿಮಾಡುವಂತೆ ಆದೇಶದಲ್ಲಿ ಸೂಚನೆ ನೀಡಿದೆ.

ಇದನ್ನೂ ಓದಿ:ಚಂದ್ರಯಾನ ಟೀಕಿಸಿದ ಪ್ರಕಾಶ್ ರೈ ದೇಶ ಬಿಟ್ಟು ಹೋಗಲಿ: ಶೋಭಾ ಕರಂದ್ಲಾಜೆ

ಪುನೀತ್​ ಕೆರೆಹಳ್ಳಿ ಪರ ವಾದ ಮಂಡಿಸಿದ ವಕೀಲರು ಸಮಾಜಸೇವೆಯಲ್ಲಿ ತೊಡಗಿರುವ ಆರೋಪಿತ ಪುನೀತ್​​ ಕೆರೆಹಳ್ಳಿ ರಾಷ್ಟ್ರ ರಕ್ಷಣಾ ಪಡೆ ಹೆಸರಿನ ಸಂಘಟನೆಯನ್ನು ಕಟ್ಟಿದ್ದಾರೆ, ಇವರ ವಿರುದ್ದ ದುರುದ್ದೇಶ ಪೂರ್ವಕವಾಗಿ ಹಲವು ಕ್ರಿಮಿನಲ್​ ಪ್ರಕರಣಗಳನ್ನು ವಿವಿಧ ಪೊಲೀಸ್​ಠಾಣೆಗಳಲ್ಲಿ ದಾಖಲಿಸಲಾಗಿದೆ.

ಈ ಸಂಬಂಧ ಪುನೀತ್​ ಕೆರೆಹಳ್ಳಿಯನ್ನು ಆಗಸ್ಟ್​ 11 ರಂದು ಪೊಲೀಸರು ಬಂಧನ ಮಾಡಿದ್ದರು. ಈ ಸಂಬಂಧ ವಾದ ಆಲಿಸಿದ ವಿಭಾಗೀಯ ಪೀಠ ನಗರ ಪೊಲೀಸ್​ ಕಮಿಷನ್​ ಸೇರಿದಂತೆ 6 ಪ್ರತಿವಾದಿಗಳಿಗೆ ನೋಟೀಸ್​ ಜಾರಿ ಮಾಡಿದೆ.

RELATED ARTICLES

Related Articles

TRENDING ARTICLES