Monday, December 23, 2024

ಪ್ರಿಯಾಂಕ್ ಖರ್ಗೆ ಸಚಿವ ಸ್ಥಾನಕ್ಕೆ ಯೋಗ್ಯವಲ್ಲ : ಬಿಜೆಪಿ ಮುಖಂಡ ಕಿಡಿ

ಕಲಬುರಗಿ : ಪ್ರಿಯಾಂಕ್ ಖರ್ಗೆ ಸಚಿವ ಸ್ಥಾನಕ್ಕೆ ಯೋಗ್ಯವಲ್ಲ ಎಂದು ಚಿತ್ತಾಪುರ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಕಿಡಿಕಾರಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್ ಸರ್ಕಾರಕ್ಕೆ ನಾನು ವಿನಂತಿ ಮಾಡುತ್ತೇನೆ. ಪ್ರಿಯಾಂಕ್ ಖರ್ಗೆಯನ್ನು ಸಚಿವ ಸ್ಥಾನದಿಂದ ವರ್ಗಾವಣೆ ಮಾಡಬೇಕು. ಇಲ್ಲದೆ ಹೋದ್ರೆ ಸಚಿವ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇಲ್ಲಿಯವರೆಗೂ ಕಾಂಗ್ರೆಸ್ ಸರ್ಕಾರ ನಾನು ಹೇಳಿರೋದನ್ನ ಮಾಡಿಕೊಂಡು ಬಂದಿದೆ. ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಅಕ್ಕಿ ಕೊಡೀಕೆ ಆಗದೆ ಇದ್ದಾಗ ದುಡ್ಡು ಕೊಡಿ ಅಂತ ಹೇಳಿದ್ದೆ. ಅಜಯ್ ಸಿಂಗ್ ಅವರಿಗೆ ಕೆಕೆಆರ್​ಡಿಬಿ ಅಧ್ಯಕ್ಷ ಸ್ಥಾನ ಕೋಡುವಂತೆ ಹೇಳಿದ್ದೆ. ಸಿದ್ದರಾಮಯ್ಯ ಅವರು ನಾನು ಹೇಳಿದ ಎರಡನ್ನು ಕೂಡ ಮಾಡಿದ್ದಾರೆ. ಹಾಗಾಗಿ, ಇದೊಂದು ಮಾಡುವಂತೆ ಕಾಂಗ್ರೆಸ್ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ಜನರಿಗೆ ಪೊಲೀಸರು ಅಂದ್ರೆ ಭಯ

ಪ್ರಿಯಾಂಕ್ ಖರ್ಗೆ ಅಧಿಕಾರ ಸ್ವಿಕಾರ ಮಾಡಿದ ದಿನದಿಂದ ಕಲಬುರಗಿಯಲ್ಲಿ ಲಾ ಅಂಡ್ ಆರ್ಡರ್ ಹದಗೆಟ್ಟಿದೆ. ಕಲಬುರಗಿಯ ಜನರಿಗೆ ಪೊಲೀಸರಿಂದ ರಕ್ಷಣೆ ಸಿಗ್ತಿಲ್ಲ. ಜನರಿಗೆ ಪೊಲೀಸರು ಅಂದ್ರೆ ಭಯ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಪ್ರಿಯಾಂಕ್ ಖರ್ಗೆ ಪೊಲೀಸರ ಸಭೆಯಲ್ಲಿ ಪೊಲೀಸರು ಅಂದ್ರೆ ಹೆದರಬೇಕು ಅಂತ ಹೇಳಿದ್ರು. ಹಾಗಾಗಿಯೇ ನಿನ್ನೆ ಮಾಡಬೂಳ ಪೊಲೀಸರು ನನ್ನ ಅರೆಸ್ಟ್ ಮಾಡಿದ್ದಾರೆ. ಪ್ರಿಯಾಂಕ್ ಖರ್ಗೆ ಹೇಳಿಕೆ ಹಿನ್ನೆಲೆ ನಾನು ದೂರು ನೀಡಿದ್ದೇನೆ. ಆದ್ರೆ, ಪೊಲೀಸರು ಜಸ್ಟ್ ರಿಸೀವಡ್ ಕೊಟ್ಟು ಕಳುಹಿಸಿದ್ದಾರೆ ಎಂದು ದೂರಿದ್ದಾರೆ.

RELATED ARTICLES

Related Articles

TRENDING ARTICLES