Thursday, December 26, 2024

ಪ್ರೇಮ ವೈಫಲ್ಯ ; ಪ್ರೇಯಸಿಯ ಕತ್ತು ಸೀಳಿದ ಪಾಪಿ

ಮಂಗಳೂರು : ಪ್ರೇಮ ವೈಫಲ್ಯದ ಹಿನ್ನೆಲೆ ಯುವತಿಯ ಕತ್ತಿಗೆ ಚಾಕು ಇರಿದು ಪರಾರಿಯಾಗಿರುವ ವ್ಯಕ್ತಿ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.

ವಿಟ್ಲ ಮೂಲದ ಗೌರಿ (22) ಇರಿಯತಕ್ಕೆ ಒಳಗಾದ ಯುವತಿ. ಮತ್ತು ವಿಟ್ಲ ನಿವಾಸಿಯಾದ ಪದ್ಮರಾಜ್ ಎಂಬುವವರು ಕಳೆದ ಕೆಲ ವರ್ಷದಿಂದ ಇಬ್ಬರು ಪ್ರೀತಿಸುತ್ತಿದ್ದರು. ಇಂದು ಮಧ್ಯಾಹ್ನ ಪುತ್ತೂರು ಬಸ್ ನಿಲ್ದಾಣದ ಬಳಿ ಇಬ್ಬರ ನಡುವೆ ವಾಗ್ವಾದ ನಡೆದಿದೆ.

ಇದನ್ನು ಓದಿ : ಪ್ರಿಯಾಂಕ್ ಖರ್ಗೆ ಸಚಿವ ಸ್ಥಾನಕ್ಕೆ ಯೋಗ್ಯವಲ್ಲ : ಬಿಜೆಪಿ ಮುಖಂಡ ಕಿಡಿ

ಈ ಹಿನ್ನೆಲೆ ಯುವತಿ ಮಹಿಳಾ ಪೋಲಿಸ್ ಠಾಣೆಗೆ ದೂರು ನೀಡಲು ಹೋಗುತ್ತಿದ್ದ ವೇಳೆ ಏಕಾಏಕಿ ಬೈಕ್ ನಲ್ಲಿ ಬಂದು ಯುವತಿಯ ತಡೆದು ಮೂರರಿಂದ ನಾಲ್ಕು ಬಾರಿ ಯುವತಿಯ ಕತ್ತಿಗೆ ಚಾಕುವಿನಿಂದ ಇರಿದಿದ್ದಾನೆ. ಸದ್ಯ ಯುವತಿಯ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ವಿಚಾರ ತಿಳಿಯುತ್ತಿದ್ದಂತೆ ಕೆಲವೇ ನಿಮಿಷಗಳಲ್ಲಿ ಆರೋಪಿಯನ್ನು ಬಂಧಿಸಿದ ಪುತ್ತೂರು ಪೋಲಿಸರು.

RELATED ARTICLES

Related Articles

TRENDING ARTICLES