Sunday, December 22, 2024

ಸಿಲಿಂಡರ್ ಸ್ಪೋಟಗೊಂಡು ವ್ಯಕ್ತಿ ಸಾವು

ಬೆಂಗಳೂರು : ಸಿಲಿಂಡರ್ ಸ್ಪೋಟಗೊಂಡು ಒರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಡೈರಿಸರ್ಕಲ್ ಬಳಿ ಇರುವ ಪೋಲಮ್ಮಸ್ ಮೆಸ್​ವೊಂದರಲ್ಲಿ ನಡೆದಿದೆ.

ನಗರದ ಕಟ್ಟಡವೊಂದರಲ್ಲಿ ಮೊದಲ ಮಹಡಿಯಲ್ಲಿ ಪೋಲಮ್ಮಸ್ ಮೆಸ್ ನಡೆಸುತ್ತಿದ್ದರು. ಇಂದು ಬೆಳಗ್ಗೆ 9 ಗಂಟೆಯಲ್ಲಿ ಎಂದಿನಂತೆ ಟಿಫನ್​ ರೆಡಿ ಮಾಡುತ್ತಿದ್ದ ಅಡುಗೆ ಭಟ್ಟರು. ಈ ವೇಳೆ ಒಂದು ಸಿಲಿಂಡರ್ ಸ್ಪೋಟಗೊಂಡಿದ್ದು, ಸಿಲಿಂಡರ್ ಪಕ್ಕ ಮಲಗಿದ್ದ ರವಿ (45) ಎಂಬಾತ ಮೃತ ದುರ್ದೈವಿ ಸಾವನ್ನಪ್ಪಿದ್ದಾನೆ.

ಇದನ್ನು ಓದಿ : ಮದುವೆ ಮಾಡು ಎಂದ ಮಗನನ್ನೇ ಕೊಂದ ತಂದೆ!!

ಇನ್ನು ಮೊದಲ ಮಹಡಿಯಲ್ಲಿ ಅಡುಗೆ ಮಾಡುತ್ತಿದ್ದ ನಾಗರಾಜ್ ಹಾಗೂ ರೋಮಯ್ಯ ಚೋರ್ಲಾ ಎಂಬುವವರು ಗಂಭೀರ ಗಾಯಗೊಂಡಿದ್ದಾರೆ. ಸದ್ಯ ಕೆಳ ಮಹಡಿಯಲ್ಲಿ ಒಟ್ಟು 10 ಕಮರ್ಷಿಯಲ್ ಸಿಲಿಂಡರ್​ಗಳನ್ನು ಇರಿಸಲಾಗಿದ್ದು, ಅದೃಷ್ಟವಶಾತ್ ಉಳಿದ ಸಿಲಿಂಡರ್​ಗಳಿಗೆ ಯಾವುದೇ ಹಾನಿಯಾಗಿಲ್ಲ.

RELATED ARTICLES

Related Articles

TRENDING ARTICLES