Sunday, December 22, 2024

ದಾಸನ ಫ್ಯಾಸ್​ಗೆ ಹಬ್ಬ : 2 ದಶಕಗಳ ಬಳಿಕ ಮತ್ತೆ ಒಂದಾದ ‘ಡಿ’ ಬಾಸ್-ಜೋಗಿ ಪ್ರೇಮ್

ಬೆಂಗಳೂರು : ದಿ ವೆಯ್ಟ್ ಈಸ್ ಎಂಡ್..! ನಾಳೆ ವರಮಹಾಲಕ್ಷ್ಮೀ ಹಬ್ಬ. ಆದ್ರೆ, ‘ಡಿ’ ಬಾಸ್​ ಅಭಿಮಾನಿಗಳು ಇಂದೇ ಸೆಲೆಬ್ರೇಶನ್ ಶುರು ಮಾಡಿದ್ದಾರೆ.

ಸ್ಯಾಂಡಲ್​ವುಡ್​ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್​ ತೂಗುದೀಪ ಹಾಗೂ ಜೋಗಿ ಪ್ರೇಮ್ ಕಾಂಬಿನೇಷನ್​ನ ಸಿನಿಮಾ ಅನೌನ್ಸ್​ ಆಗಿದೆ. ಈ ಚಿತ್ರಕ್ಕೆ ಕೆವಿಎನ್ (KVN) ಸಂಸ್ಥೆ ಬಂಡವಾಳ ಹೂಡುತ್ತಿದೆ.

ಹೌದು, ಕರಿಯಾ ಸಿನಿಮಾ ಬಳಿಕ 2 ದಶಕಗಳ ನಂತರ ಮತ್ತೆ ಈ ಜೋಡಿ ಒಂದಾಗಿದೆ. ಇದು ಸಹಜವಾಗಿಯೇ ಡಿ ಬಾಸ್ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸುವುದರ ಜೊತೆಗೆ ನಿರೀಕ್ಷೆಯನ್ನು ಹುಟ್ಟಿಸಿದೆ. ಇದರ ಜೊತೆಗೆ ಇತ್ತೀಚೆಗೆ ದರ್ಶನ್‌ ಹಾಗೂ ಜೋಗಿ ಪ್ರೇಮ್‌ ನಡುವೆ ಮನಸ್ತಾಪ ಇದೆ ಎಂಬ ವದಂತಿಗೆ ಇಬ್ಬರೂ ಸ್ಟಾರ್​ಗಳು ತೆರೆ ಎಳೆದಿದ್ದಾರೆ.

ದರ್ಶನ್‌ ಸದ್ಯ ಕಾಟೇರ್‌ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರ ಮುಂದಿನ ಸಿನಿಮಾ ಬಗ್ಗೆ ಭಾರಿ ಚರ್ಚೆ ಆಗುತ್ತಿದೆ. ಇದೀಗ ಡಿ ಬಾಸ್‌ ಮತ್ತೆ ಪ್ರೇಮ್‌ ಜೊತೆ ಕೈಜೋಡಿಸಲಿದ್ದಾರೆ.

 

ಇದನ್ನೂ ಓದಿ : ದರ್ಶನ್ ಮಗು ತರ.. ಕೆಣಕಿದ್ರೆ ಫೈಯರ್ ಫಿಕ್ಸ್ : ರವಿಚಂದ್ರನ್

ಜೋಗಿ ಪ್ರೇಮ್ ಹೇಳಿದ್ದೇನು?

ನಟ ದರ್ಶನ್ ಮತ್ತು ನಾನು ಮತ್ತೆ ಯಾವಾಗ ಒಟ್ಟಿಗೆ ಕೆಲಸ ಮಾಡುತ್ತೇವೆ ಎಂದು ಎಲ್ಲರೂ ಯಾವಾಗಲೂ ಕೇಳುತ್ತಿದ್ದರು. ನಿಮ್ಮೆಲ್ಲರ ಆಶೀರ್ವಾದದಿಂದ ನಾವು ಅಂತಿಮವಾಗಿ ಕೆವಿಎನ್ ಪ್ರೊಡಕ್ಷನ್(KVN Productions)ನೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಲು ಇಂದು ನನಗೆ ಸಂತೋಷವಾಗಿದೆ ಎಂದು ಟ್ವೀಟ್ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ.

D58 ಶೂಟಿಂಗ್ ಯಾವಾಗ?

ದರ್ಶನ್ ಅವರು ತರುಣ್ ಸುಧೀರ್ ನಿರ್ದೇಶನದ ಕಾಟೇರ ನಂತರ ಮಿಲನ ಪ್ರಕಾಶ್ ನಿರ್ದೇಶನದ ಚಿತ್ರದ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ. ಈ ಚಿತ್ರವು ಕೂಡ ರಾಕ್​ಲೈನ್​ ಪ್ರೊಡಕ್ಷನ್​ ನಿರ್ಮಾಣದ ಅಡಿಯಲ್ಲಿ ಮೂಡಿ ಬರಲಿದೆ. ಬಳಿಕ, ಜೋಗಿ ಪ್ರೇಮ್​ ನಿರ್ದೇಶನದ D58 ಚಿತ್ರದ ಶೂಟಿಂಗ್ ನಲ್ಲಿ ಡಿ ಬಾಸ್ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

RELATED ARTICLES

Related Articles

TRENDING ARTICLES