Wednesday, January 22, 2025

ಕಾಂಗ್ರೆಸ್ ಲೋಕಸಭೆ ಟಿಕೆಟ್ ಆಫರ್ ಕೊಟ್ಟಿದೆ : ಅಶೋಕ್ ಸ್ಫೋಟಕ ಹೇಳಿಕೆ

ಬೆಂಗಳೂರು : ಕಾಂಗ್ರೆಸ್​ನವ್ರು ಲೋಕಸಭೆ ಟಿಕೆಟ್ ಕೊಡ್ತೀವಿ ಅಂತ ಹೇಳಿರೋದಾಗಿ ನನ್ನ ಮುಂದೆ ಎಸ್​.ಟಿ ಸೋಮಶೇಖರ್ ಒಪ್ಪಿಕೊಂಡ್ರು ಎಂದು ಮಾಜಿ ಸಚಿವ ಆರ್​. ಅಶೋಕ್ ಹೊಸ ಬಾಂಬ್ ಸಿಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್​ನವರು ಆಹ್ವಾನ ಮಾಡಿದ್ದು ನಿಜ. ಆದರೆ, ಯಾವುದೇ ಕಾರಣಕ್ಕೂ ಲೋಕಸಭೆ ಅಭ್ಯರ್ಥಿ ಆಗಲ್ಲ ಅಂತನೂ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

ಸೋಮಶೇಖರ್ ಜೊತೆಗೆ ಸುಮಾರು ಒಂದು ಗಂಟೆ ಕಾಲ ಚರ್ಚೆ ಮಾಡಿದ್ದೇನೆ. ಅವರು ಅವರ ಕ್ಷೇತ್ರದ ಪರಿಸ್ಥಿತಿ ಬಗ್ಗೆ ಹೇಳಿಕೊಂಡ್ರು. ಅವರ ಬೆಂಬಲಿಗರು ಇಲ್ಲಿ ಟಿಕೆಟ್ ಸಿಗಲ್ಲ ಅಂತ ಹೋಗಿದಾರೆ ಅಂದ್ರು. ಕ್ಷೇತ್ರದ ಸಮಸ್ಯೆ ಬಗೆಹರಿಸುವಂತೆ ತಿಳಿಸಿದ್ದಾರೆ. ಅವರ ಕ್ಷೇತ್ರದಲ್ಲಿ ಯಾರ್ಯಾರಿಂದ ಸಮಸ್ಯೆ ಆಗ್ತಿದೆ ಅಂತ ತಿಳಿಸಿದ್ದಾರೆ. ಐದಾರು ಜನರ ಹೆಸರು ಹೇಳಿದ್ದಾರೆ. ಅವರ ಜತೆ ಸಮಗ್ರವಾಗಿ ಚರ್ಚೆ ಮಾಡಿದ್ದೀನಿ ಎಂದು ಹೇಳಿದ್ದಾರೆ.

ಭವಿಷ್ಯ ಹಾಳು ಮಾಡಿಕೊಳ್ಳಬೇಡಿ

ಕಾಂಗ್ರೆಸ್ ಪಕ್ಷಕ್ಕೆ ಹೋಗಿ ಭವಿಷ್ಯ ಹಾಳು ಮಾಡಿಕೊಳ್ಳದಂತೆ ಹೇಳಿದ್ದೇನೆ. ಪಕ್ಷ ಬಿಡಲ್ಲ ಅಂದಿದ್ದಾರೆ. ನನಗೆ ಗೊತ್ತಿರುವಂತೆ ಅವರು ಕಾಂಗ್ರೆಸ್ ಪಕ್ಷಕ್ಕೆ ಹೋಗಲ್ಲ. ಅವರ ಕ್ಷೇತ್ರದಲ್ಲಿ ಅವರ ವಿರುದ್ಧ ಕೆಲವರು ಅಪಪ್ರಚಾರ ನಡೆಸ್ತಿದಾರೆ ಅಂತ ಹೇಳಿದರು. ನಾನು ಅವರಿಗೆ ಪಕ್ಷದ ಮುಖಂಡನಾಗಿಯೂ, ಸ್ನೇಹಿತನಾಗಿಯೂ ಮಾತಾಡಿದ್ದೇನೆ ಎಂದು ಆರ್​. ಅಶೋಕ್ ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES