Sunday, December 29, 2024

ಸಾವಿನಲ್ಲೂ ಸಾರ್ಥಕತೆ ಮೆರೆದ ವಿದ್ಯಾರ್ಥಿ

ಹಾಸನ : ಯುವಕನೋರ್ವ ಸಾವಿನ ನಂತರವೂ ಅಂಗಾಗ ದಾನ ಮಾಡಿ ಸಾರ್ಥಕತೆ ಮೆರೆದ ಘಟನೆ ಹಾಸನದಲ್ಲಿ ನಡೆದಿದೆ.

ನಗರದ ಆಚಾರ್ಯ ಪಿಯುಸಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಹರ್ಷಿಲ್ ಎನ್ (16) ಎಂಬಾತ ಮೃತ ದುರ್ದೈವಿ. ಅಪಘಾತದಿಂದ ಹರ್ಷಿಲ್ ತಲೆಗೆ ಪೆಟ್ಟು ಬಿದ್ದು ಗಂಭೀರ ಗಾಯವಾಗಿತ್ತು. ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಇದನ್ನು ಓದಿ : ವರಮಹಾಲಕ್ಷ್ಮಿ ಹಬ್ಬಕ್ಕೆ ತಾವರೆ ಹೂ ಕೀಳಲು ಹೋದ ತಂದೆ ಮಗ ಸಾವು!

ಯುವಕನ ಸಾವಿನಿಂದ ಧೃತಿಗೆಟ್ಟ ಕುಟುಂಬ ಜಯದೇವ ಆಸ್ಪತ್ರೆಗೆ ಹೃದಯ, ಏಸ್ಟರ್ ಆಸ್ಪತ್ರೆಗೆ ಲಿವರ್, ಬಿಜಿಎಸ್​ಗೆ ಕಿಡ್ನಿ ಹಾಗೂ ಚೆನ್ನೈನ ಆಸ್ಪತ್ರೆಗೆ ಶ್ವಾಸಕೋಶಗಳನ್ನ ದಾನ ಮಾಡಿ, ಸುಮಾರು ಎಂಟು ಜನರ ಬಾಳಿಗೆ ಬೆಳಕಾಗಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ಮೃತ ಯುವಕ ತನ್ನ ತಂದೆ-ತಾಯಿಯನ್ನು ಕಳೆದುಕೊಂಡಿದ್ದರು. ಬಳಿಕ ಹರ್ಷಿಲ್​ ತಮ್ಮ ಅಜ್ಜಿ ಮನೆಯಲ್ಲಿ ವಾಸಿವಾಗಿ ತನ್ನ ವಿದ್ಯಾಭ್ಯಾಸವನ್ನು ಮಾಡುತ್ತಿದ್ದರು. ಸದ್ಯ ಹರ್ಷಿಲ್ ಸಾವಿನಿಂದ ಮನನೊಂದು ದಿಗ್ಬ್ರಾಂತರಾದ ಕುಟುಂಬ ಸಾವಿನಲ್ಲೂ ಸಾರ್ಥಕತೆ ತೋರಲು ಅಂಗಾಗ ದಾನ ಮಾಡಿದ್ದಾರೆ.

ಘಟನೆ ಬಡಾವಣೆ ಪೊಲೀಸ್ ಠಾಣಾ ವ್ತಾಪ್ತಿಯಲ್ಲಿ‌ ನಡೆದಿದೆ.

RELATED ARTICLES

Related Articles

TRENDING ARTICLES