Tuesday, December 24, 2024

150 ರೂಗಳ ಆಸೆಗೆ 22 ಲಕ್ಷ ಕಳೆದುಕೊಂಡ ವ್ಯಕ್ತಿ!

ಬೆಂಗಳೂರು : 150 ರೂಪಾಯಿಗಳ ಆಸೆಗೆ ಬಿದ್ದ ವ್ಯಕ್ತಿ 22 ಲಕ್ಷ ಹಣವನ್ನು ಕಳೆದುಕೊಂಡ ಘಟನೆ ಬೆಂಗಳೂರಿನ ವೈಟ್​ ಫೀಲ್ಡ್​ ವ್ಯಾಪ್ತಿಯಲ್ಲಿ ನಡೆದಿದೆ.

ಶಕ್ತಿಕಾನ್ ಮಿಶ್ರ ವಂಚನೆಗೊಳಗಾದ ವ್ಯಕ್ತಿ, ಐಶಾ ಎಂಬ ಅಪರಿಚಿತ ಮಹಿಳೆಯಿಂದ ಲಕ್ಷಾಂತರ ಹಣ ವಂಚನೆ. ಆನ್​ಲೈನ್​ ರಿವ್ಯೂ ಹೆಸರಿನಲ್ಲಿ ಟೆಲಿಗ್ರಾಂ ಆ್ಯಪ್​ ಡೌನ್​ಲೋಡ್​ ಲಿಂಕ್​ನ್ನು ಶಕ್ತಿಕಾನ್​ ವಿಶ್ರ ಎನ್ನುವವರಿಗೆ ಕಳುಹಿಸಿದ ​ ಅಪರಿಚಿತ ಮಹಿಳೆ. ಮೊದಲು 150 ರೂಪಾಯಿ ಖಾತೆಗೆ ಕಳುಹಿಸಿ ಬಳಿಕ ಹೆಚ್ಚಿನ ಹಣಪಡೆಯಬಹುದು ಎಂದು ಆಸೆಬರುವಂತೆ ಮಾಡಿದ್ದಾರೆ.

ಇದನ್ನು ಓದಿ: ಚಂದ್ರಯಾನ ಟೀಕಿಸಿದ ಪ್ರಕಾಶ್ ರೈ ದೇಶ ಬಿಟ್ಟು ಹೋಗಲಿ: ಶೋಭಾ ಕರಂದ್ಲಾಜೆ

ಬಳಿಕ ಶಕ್ತಿಕಾನ್​ ಮಿಶ್ರ ಆಪ್​ ಲಿಂಕ್​ ಕ್ಲಿಕ್​ ಮಾಡುತ್ತಿದ್ದಂತೆ ವಂಚಕರು ಆಪ್ ನಲ್ಲಿ ಅಪ್ ಲೋಡ್ ಆಗಿದ್ದ ಬೇರೆ ಬೇರೆ ಖಾತೆಗಳಿಗೆ 22 ಲಕ್ಷಕ್ಕೂ ಹೆಚ್ಚು ಹಣ ವರ್ಗಾವಣೆಮಾಡಿಕೊಂಡು ವಂಚನೆ ಮಾಡಿದ್ದಾರೆ. ಬಳಿಕ ಆಪ್ ಬ್ಲಾಕ್ ಆಗಿದೆ.

ಘಟನೆಯ ಬಳಿಕ ವಂಚನೆಗೊಳಗಾದ ವ್ಯಕ್ತಿ ವೈಟ್ ಫೀಲ್ಡ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

RELATED ARTICLES

Related Articles

TRENDING ARTICLES