Monday, December 23, 2024

ಸಂಪ್ ಕ್ಲೀನ್ ಮಾಡುವಾಗ ಕರೆಂಟ್ ಹೊಡದು ವ್ಯಕ್ತಿ ಸಾವು

ಬೆಂಗಳೂರು : ಸಂಪ್ ಸ್ವಚ್ಚಗೊಳಿಸಲು ಹೋದ ವ್ಯಕ್ತಿ ಕರೆಂಟ್ ಶಾಕ್ ಹೊಡೆದು ಸಾವನ್ನಪ್ಪಿದ್ದಾನೆ ಘಟನೆ ಜಯನಗರ 4 ಬ್ಲಾಕ್​ನಲ್ಲಿ ನಡೆದಿದೆ.

ಆದಿನಾರಾಯಣ್ ನಾಯ್ಕ್ (44) ಮೃತ ದುರ್ದೈವಿ. ನಿನ್ನೆ ಮಧ್ಯಾಹ್ನ ಸಂತೋಷ್ ಎಂಬುವವರ ಬಿಲ್ಡಿಂಗ್​ನಲ್ಲಿ ಸಂಪ್ ಕ್ಲೀನ್ ಮಾಡಲು ಹೋಗಿದ್ದ ವ್ಯಕ್ತಿ. ಈ ವೇಳೆ ಮಾಲೀಕ ಮೋಟಾರ್ ಆಫ್ ಮಾಡಿ ಸ್ವಚ್ಛಗೊಳಿಸಲು ತಿಳಿಸದೆ ಹಾಗೇ ಹೋಗಿದ್ದರು.

ಬಳಿಕ ಅದನ್ನು ಅರಿಯದ ಆದಿನಾರಾಯಣ್ ಸಂಪ್ ಒಳಗೆ ಇಳಿದಿದ್ದ ವೇಳೆ ಅಲ್ಪ ಪ್ರಮಾಣದ ನೀರಿನಲ್ಲಿ ಕರೆಂಟ್ ಪ್ರಹರಿಸಿ ಶಾಕ್ ಹೊಡೆದು ಒದ್ದಾಡಿದ್ದಾನೆ.

ಇದನ್ನು ಓದಿ : ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿನಿಗೆ ಗಂಭೀರ ಗಾಯ

ತಕ್ಷಣ ಸಂಜಯ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಈ ಘಟನೆ ಬಗ್ಗೆ ಮೃತನ ಪತ್ನಿ ಬಿಲ್ಡಿಂಗ್ ಮಾಲೀಕ ಹಾಗೂ ಕಂಟ್ರಾಕ್ಟರ್ ಚಂದ್ರು ಎಂಬುವವರ ವಿರುದ್ಧ ದೂರು ನೀಡಿದ್ದು, ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

RELATED ARTICLES

Related Articles

TRENDING ARTICLES