Sunday, January 19, 2025

ನೆಹರು ತಾರಾಲಯದಲ್ಲಿ ಚಂದ್ರಯಾನ 3 ವೀಕ್ಷಣೆಗೆ ಅವಕಾಶ!

ಬೆಂಗಳೂರು : ಇಂದು ಚಂದ್ರಯಾನ – 3 ಚಂದ್ರಚುಂಬನಕ್ಕೆ ಕ್ಷಣಗಣನೆ ಆರಂಭವಾಗಿದ್ದು ನಗರದ ನೆಹರು ತಾರಾಲಯದಲ್ಲಿ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.

ಚಂದ್ರಯಾನ-3 ಐತಿಹಾಸಿಕ ಕ್ಷಣಕ್ಕೆ ಭಾರತ ಕಾತುರದಿಂದ ಕಾಯುತ್ತಿದ್ದು, ಇಂದು ಸಂಜೆ 6 ಗಂಟೆ 4 ನಿಮಿಷಕ್ಕೆ ಚಂದ್ರನ ಮೇಲ್ಮೈ ಯನ್ನು ರೋವರ್ ತಲುಪಲಿದೆ. ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್ ಕೌತುಕವನ್ನು ವೀಕ್ಷಿಸಲು ಬೆಂಗಳೂರಿನ ನೆಹರು ತಾರಾಲಯದಲ್ಲಿ ದೊಡ್ಡ ಎಲ್‌ಇಡಿ ಸ್ಕ್ರೀನ್ ಗಳ ಮೂಲಕ ಅವಕಾಶ ಕಲ್ಪಿಸಲಾಗಿದೆ.

ಇದನ್ನು ಓದಿ: ಚುನಾವಣಾ ಪ್ರಚಾರದ ರಾಯಭಾರಿಯಾದ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡುಲ್ಕರ್​

ಸಂಜೆ 6ಗಂಟೆ 04 ನಿಮಿಷಕ್ಕೆ ಚಂದ್ರನನ್ನು ವಿಕ್ರಮ್ ಮಾಡ್ಯೂಲ್ ಸ್ಪರ್ಷಿಸಲಿದೆ, ಸಂಜೆ 5 ಗಂಟೆಯಿಂದ 6.30ರವರೆಗೆ ಲ್ಯಾಂಡಿಂಗ್ ದೃಶ್ಯ ವೀಕ್ಷಣೆಗೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಅವಕಾಶವನ್ನು ಕಲ್ಪಿಸಲಾಗಿದೆ. ಇದಕ್ಕಾಗಿ ನೆಹರು ತಾರಾಲಯದ ಹೊರಭಾಗದಲ್ಲಿ 8 ರಿಂದ 10 ಅಡಿ ಎತ್ತರದ ಎಲ್‌ಇಡಿ ಪರದೆ ಅಳವಡಿಕೆ ಮಾಅಲಾಗಿದೆ.

RELATED ARTICLES

Related Articles

TRENDING ARTICLES