ಚಿಕ್ಕಬಳ್ಳಾಪುರ : ನನಗೀಗ 81 ವರ್ಷ. ಬಿಜೆಪಿ ಪಕ್ಷದಲ್ಲಿ 80ರ ನಂತರ ಟಿಕೆಟ್ ಕೊಡಲ್ಲ ಎಂದು ಚಿಕ್ಕಬಳ್ಳಾಪುರ ಸಂಸದ ಬಿ.ಎನ್. ಬಚ್ಚೇಗೌಡ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಾತನಾಡಿರುವ ಅವರು, ಮುಂದಿನ ದಿನಗಳಲ್ಲಿ ವಯೋ ಸಹಜ ಕಾರಣ ಪಕ್ಷ ಟಿಕೆಟ್ ನೀಡಲ್ಲ. ಹಾಗಾಗಿ, ನಾನು ಇನ್ಮುಂದೆ ಪಕ್ಷದ ಚಟುವಟಿಕೆ ಮಾಡಿಕೊಂಡಿರ್ತೀನಿ ಅಷ್ಟೇ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿ ಪಕ್ಷ ವೀಕ್ ಆಗ್ತಿದೆ. ವಿಪಕ್ಷ ನಾಯಕನ ಆಯ್ಕೆ, ರಾಜ್ಯಾಧ್ಯಕ್ಷರ ಆಯ್ಕೆ ಮಾಡಿಕೊಂಡಿಲ್ಲ. ಬಾಂಬೆ ಬಾಯ್ಸ್ ಮತ್ತೆ ಕಾಂಗ್ರೆಸ್ಗೆ ಘರ್ ವಾಪಸಿ ಆಗೋಕೆ ಕಾರಣ ಇದೇ. ಶಾಸಕರು ಅಭಿವೃದ್ದಿ ಕೆಲಸಗಳು ಆಗ್ತಿಲ್ಲ. ರಾಜ್ಯ ಸರ್ಕಾರ ದುಡ್ಡು ಕೊಡ್ತೀವಿ ಅಂದ್ರು, ಕೇಂದ್ರ ಸರ್ಕಾರ ಅಕ್ಕಿಕೊಡದೆ ಮೋಸ ಮಾಡಿದೆ ಎಂದು ತಿಳಿಸಿದ್ದಾರೆ.
ಬಿಜೆಪಿ ಬರುತ್ತೋ ಇಲ್ವೋ?
ಕೇಂದ್ರದಲ್ಲಿ ಮತ್ತೆ ಬಿಜೆಪಿ ಬರುತ್ತೋ ಇಲ್ವೋ? ಮೋದಿ ಮತ್ತೆ ಪ್ರಧಾನಿ ಆಗ್ತಾರೋ ಇಲ್ವೋ ಹೇಳಕ್ಕಾಗಲ್ಲ. ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಉತ್ತಮವಾದ ಅಧಿಕಾರ ನಡೆಸುತ್ತಿದೆ. ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳು ಜನಪರವಾಗಿವೆ. ರಾಜ್ಯದಲ್ಲಿ ಮೂರು ಪಕ್ಷಗಳು ಶಾಶ್ವತವಾಗಿ ಇರುತ್ತವೆ. ಹೆಚ್.ಡಿ. ದೇವೇಗೌಡ, ಕುಮಾರಸ್ವಾಮಿ ಇರುವವರೆಗೂ ಜೆಡಿಎಸ್ ಗೆ ತೊಂದರೆ ಇಲ್ಲ. ಪ್ರಾದೇಶಿಕ ಪಕ್ಷವಾಗಿ ಉಳಿದುಕೊಳ್ಳುತ್ತೆ. ಬಿಜೆಪಿ ಜತೆ ವೀಲೀನ ಆಗೊಲ್ಲ ಎಂದು ಪಕ್ಷಕ್ಕೆ ಡ್ಯಾಮೇಜ್ ಆಗುವ ರೀತಿ ಬಚ್ಚೇಗೌಡ ಹೇಳಿಕೆ ನೀಡಿದ್ದಾರೆ.