Monday, December 23, 2024

ಅಕ್ರಮ ಕಲ್ಲುಗಣಿಗಾರಿಕೆ ; ಭೂ ವಿಜ್ಞಾನ ಅಧಿಕಾರಿಗಳ ದಾಳಿ

ತುಮಕೂರು : ಅಕ್ರಮ ಕಲ್ಲು ಗಣಿಗಾರಿಕೆ ಮಾಡುತ್ತಿದ್ದವರ ಮೇಲೆ ಸದ್ದಿಲ್ಲದೆ ದಾಳಿ ಮಾಡಿದ ಅಧಿಕಾರಿಗಳು ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ಗದ್ದೆಹಳ್ಳಿ ನಡೆದಿದೆ.

ಗದ್ದೆಹಳ್ಳಿ ಗ್ರಾಮದಲ್ಲಿ ಹಲವು ದಿನಗಳಿಂದ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿತ್ತು. ಈ ಹಿನ್ನೆಲೆ ನಿನ್ನೆ ಖಚಿತ ಮಾಹಿತಿ ಸಿಕ್ಕಿದ್ದು, ಕಲ್ಲು ಗಣಿಗಾರಿಕೆ ಮೇಲೆ ಭೂ ವಿಜ್ಞಾನ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಸಂತೋಷ್, ಕಾರ್ತಿಕ, ತೇಜಸ್ವಿನಿ, ನಾಗರಾಜ ಮತ್ತು ಜಯರಾಮೇಗೌಡ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಸದ್ಯ ಸಿಎಸ್ ಪುರ ಪೋಲಿಸ್ ಠಾಣೆಯಲ್ಲಿರೋ ವಾಹನಗಳು ಮತ್ತು ಎರಡು ಇಟಾಚಿ, ಕಂಪ್ರೇಸರ್ ಸೇರಿದಂತೆ ಒಂದು ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು.

ಇದನ್ನು ಓದಿ : ಸಂಪ್ ಕ್ಲೀನ್ ಮಾಡುವಾಗ ಕರೆಂಟ್ ಹೊಡದು ವ್ಯಕ್ತಿ ಸಾವು

ಸದ್ಯ ಅಕ್ರಮ ಕಲ್ಲುಗಣಿಗಾರಿಕೆ ಮಾಲೀಕರ ಮೇಲೆ ಕೇಸ್ ದಾಖಲಿಸಲು ಸಿದ್ಧತೆ ನಡೆಸುತ್ತಿರುವ ಅಧಿಕಾರಿಗಳು.

RELATED ARTICLES

Related Articles

TRENDING ARTICLES