Wednesday, January 22, 2025

ಚುನಾವಣಾ ಪ್ರಚಾರದ ರಾಯಭಾರಿಯಾದ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡುಲ್ಕರ್​

ನವದೆಹಲಿ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಕ್ರಿಕೆಟ್​ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಚುನಾವಣಾ ಆಯೋಗವು ‘ನ್ಯಾಷನಲ್ ಐಕಾನ್’ ಎಂದು ಘೋಷಿಸಿದೆ. ಮತದಾನ ಉತ್ತೇಜಿಸಲು ಈ ವಿಶಿಷ್ಟ ಕ್ರಮವನ್ನು ಕೈಗೊಂಡಿದೆ.

ಸಚಿನ್ ತೆಂಡೂಲ್ಕರ್ ಮತ್ತು ಚುನಾವಣಾ ಸಮಿತಿ ನಡುವೆ ಒಪ್ಪಂದ ಪತ್ರಕ್ಕೆ ಇಂದು ಸಹಿ ಹಾಕಲಾಗುತ್ತದೆ. 3 ವರ್ಷಗಳಒಪ್ಪಂದದ ಭಾಗವಾಗಿ, ತೆಂಡೂಲ್ಕರ್ ಅವರು ಮತದಾರರಲ್ಲಿ ಜಾಗೃತಿ ಮೂಡಿಸಲಿದ್ದಾರೆ.

ಇದನ್ನೂ ಓದಿ: ಚೆಸ್ ವಿಶ್ವಕಪ್ : ಮೊದಲ ಕ್ಲಾಸಿಕ್ ಗೇಮ್ ಡ್ರಾ

ಈ ಸಹಯೋಗವು ಮುಂಬರುವ ಚುನಾವಣೆಗಳಲ್ಲಿ, ಅದರಲ್ಲೂ ವಿಶೇಷವಾಗಿ 2024ರ ಲೋಕಸಭೆ ಚುನಾವಣೆಗೆ ಮತದಾರರ ಭಾಗವಹಿಸುವಿಕೆ ಹೆಚ್ಚಿಸಲು ನೆರವಾಗಲಿದೆ. ನಗರ ಪ್ರದೇಶದ ಮತದಾರರು ಹಾಗೂ ಯುವಕರು ಮತದಾನ ಪ್ರಕ್ರಿಯೆಯಲ್ಲಿ ನಿರುತ್ಸಾಹ ತೋರುತ್ತಿದ್ದಾರೆ. ಅವರ ಮೇಲೆ ಸಚಿನ್​ ತೆಂಡುಲ್ಕರ್​ ಪ್ರಭಾವ ಬೀರುವುದು ಆಯೋಗದ ಮುಖ್ಯ ಉದ್ದೇಶವಾಗಿದೆ.

RELATED ARTICLES

Related Articles

TRENDING ARTICLES