Thursday, December 19, 2024

20 ವರ್ಷ ಕಾಂಗ್ರೆಸ್ ಅಧಿಕಾರದಲ್ಲಿ ಇರುತ್ತೆ : ಶಿವರಾಜ್ ತಂಗಡಗಿ

ಕೊಪ್ಪಳ : ಇನ್ನೂ 15ರಿಂದ 20 ವರ್ಷ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರುತ್ತೆ ಎಂದು ಸಚಿವ ಶಿವರಾಜ್ ತಂಗಡಗಿ ವಿಶ್ವಾಸ ವ್ಯಕ್ತಪಡಿಸಿದರು.

ದಲಿತ ಸಿಎಂ ವಿಚಾರವಾಗಿ ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಮಾತನಾಡಿರುವ ಅವರು, ಯಾರನ್ನು ಮುಖ್ಯಮಂತ್ರಿ ಮಾಡಬೇಕು ಅನ್ನೋದು ಹೈಕಮಾಂಡ್ ನಿರ್ಧಾರ ಮಾಡುತ್ತೆ. ಯಾರೇ ಏನೇ ಮಾತನಾಡಲಿ, ನಿರ್ಧಾರ ಮಾಡೋದು ದೆಹಲಿ ಹೈಕಮಾಂಡ್ ಎಂದರು.

ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಗಾಳ ವಿಚಾರವಾಗಿ ಮಾತನಾಡಿ, ಅವರಿಗೆ ಗಾಳನೂ ಇಲ್ಲ, ಮೀನು ಇಲ್ಲ. ಬಿಜೆಪಿಯವರಿಗೆ ಆಪರೇಷನ್ ಮಾಡೋದೆ ಆಡಳಿತ. ಮೊನ್ನೆ ಆಪರೇಷನ್ ಮಾಡಿ, ಕತ್ರಿಯನ್ನು ಹೊಟ್ಟೆಯಲ್ಲಿ ಇಟ್ಟು ಹೊಲಿಗೆ ಹಾಕಿದ್ದಾರೆ. ಅದಕ್ಕೆ ಬಿಜೆಪಿಗೆ ಇದೀಗ ಸಮಸ್ಯೆ ಆಗಿದೆ. ನಾವು ಆಪರೇಷನ್ ಮಾಡೋದಿಲ್ಲ. ನಮಗೆ ಶಾಸಕರ ಕೊರತೆ ಇಲ್ಲ. ತತ್ವ ಸಿದ್ದಾಂತ ಒಪ್ಪಿ ಬೇರೆ ಪಕ್ಷದವರು ಬರ್ತಾ ಇದ್ದಾರೆ ಎಂದು ಅನ್ಯ ಪಕ್ಷದ ಶಾಸಕರ ಸೇರ್ಪಡೆ ಬಗ್ಗೆ ಸುಳಿವು ನೀಡಿದರು.

ಬಿಜೆಪಿಗೆ ಯೋಗ್ಯತೆ ಇಲ್ಲ

ಕಾಂಗ್ರೆಸ್ ಪಕ್ಷ ಯಾರನ್ನೂ ನಂಬಿ ರಾಜಕಾರಣ ಮಾಡುತ್ತಿಲ್ಲ. ಮೂರು ತಿಂಗಳಿನಲ್ಲಿ ವಿರೋಧ ಪಕ್ಷದ ನಾಯಕನನ್ನು ನೇಮಕ ಮಾಡುವ ಯೋಗ್ಯತೆ ಬಿಜೆಪಿಗೆ ಇಲ್ಲ. ಯೋಗ್ಯತೆ ಇರಲಾರದವರು ನಮ್ಮನ್ನು ಆಪರೇಷನ್ ಮಾಡ್ತಾರಾ? ವಿಪಕ್ಷ ನಾಯಕ ಯಾರು ಅಂತ ಹೇಳೋಕೆ ಯೋಗ್ಯತೆ ಇರಲಾರದವರು, ಆಪರೇಷನ್ ಮಾಡೋಕೆ ಸಾಧ್ಯ ಇದೇನಾ? ಎಂದು ಶಿವರಾಜ್ ತಂಗಡಗಿ ಲೇವಡಿ ಮಾಡಿದರು.

RELATED ARTICLES

Related Articles

TRENDING ARTICLES