Monday, December 23, 2024

ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿನಿಗೆ ಗಂಭೀರ ಗಾಯ

ಬೆಂಗಳೂರು : ವಿದ್ಯುತ್ ತಂತಿ ತಗುಲಿ ಒರ್ವ ವಿದ್ಯಾರ್ಥಿನಿಗೆ ಗಂಭೀರ ಗಾಯ ಮೈಕೋಲೇಔಟ್ ಸಂಚಾರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಸ್ತೆಯ ಬಳಿ ಒಂದು ಸಿಮೆಂಟ್ ಮಿಕ್ಸರ್ ಟ್ಯಾಂಕರ್ ಒಂದು ನಿಂತಿದ್ದು, ಅದರ ಮೇಲೆ ಕೇಬಲ್ ವೈಯರ್ ಬಿದ್ದು  ಅದು ಜಾರಿ ಕೆಳಗಡೆ ಬಿದ್ದಿತ್ತು. ಈ ವೇಳೆ ಅದೇ ಮಾರ್ಗದಲ್ಲಿ ಬಂದಿದ್ದ ವಾಟರ್ ಟ್ಯಾಂಕರ್​ಗೆ ಸಿಲುಕಿ ವಿದ್ಯುತ್ ಕಂಬವನ್ನು ಎಳೆದು ಹಾಕಿದೆ. ಎಳೆದ ರಭಸಕ್ಕೆ ವಿದ್ಯುತ್ ಕಂಬ ಕೆಳಗೆ ಬಿದ್ದು, ಅದರ ತಂತಿ ವಿದ್ಯಾರ್ಥಿನಿಯ ಮೇಲೆ ಬಿದ್ದಿದೆ.

ಈ ಘಟನೆಯಿಂದ ವಿದ್ಯಾರ್ಥಿನಿಗೆ ಗಂಭೀರ ಗಾಯವಾಗಿದ್ದು, ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನು ಓದಿ : ಕಾವೇರಿ ನೀರು ಕಾನೂನು ಹೋರಾಟಕ್ಕೆ ಸರ್ವ ಪಕ್ಷಗಳ ಬೆಂಬಲ!

ಈ ಹಿನ್ನೆಲೆ ವಾಟರ್ ಟ್ಯಾಂಕರ್ ಚಾಲಕನ ಅಜಾಗರೂಕತೆ ಮತ್ತು ನಿರ್ಲಕ್ಷವಹಿಸಿದ್ದೇ, ಕಾರಣ ಎಂದು ವಾಟರ್‌ ಟ್ಯಾಂಕರ್‌ ಚಾಲಕ ಹಾಗು ಸಿಮೆಂಟ್‌ ಮಿಕ್ಸರ್‌ ಲಾರಿ ಚಾಲಕನ ವಿರುದ್ಧ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

RELATED ARTICLES

Related Articles

TRENDING ARTICLES