Wednesday, January 22, 2025

ವರಮಹಾಲಕ್ಷೀಗೂ ಮುನ್ನವೇ ಜನರಿಗೆ ಬೆಲೆ ಏರಿಕೆ ಶಾಕ್

ಬೆಂಗಳೂರು : ವರಮಹಾಲಕ್ಷೀ ಹಬ್ಬಕ್ಕೂ ಮುನ್ನವೇ ಮಾರುಕಟ್ಟೆಯಲ್ಲಿ ಹೂ, ಹಣ್ಣಿನ ವ್ಯಾಪಾರ ಭರಾಟೆ ಜೋರಿನಲ್ಲಿ ನಡೆಯುತ್ತಿದೆ.

ಶ್ರಾವಣ ಮಾಸ ಆರಂಭದಿಂದಲೂ ಮಾರುಕಟ್ಟೆಗಳಲ್ಲಿ ವ್ಯಾಪಾರ ಗರಿ ಗೆದರಿದೆ. ಅದರಿಂದ ಸಿಲಿಕಾನ್ ಸಿಟಿಯಲ್ಲಿ ಕಳೆಗಟ್ಟಿದ ಹಬ್ಬದ ವಾತವರಣ. ಶ್ರುಕ್ರವಾರ ವರಮಹಾಲಕ್ಷೀ ವ್ರತದ ಇರುವ ಹಿನ್ನೆಲೆ ಹಬ್ಬಕ್ಕೆ ಇನ್ನು 2 ದಿನ ಬಾಕಿ ಇರುವಾಗಲೇ ಜನರಿಗೆ ಬೆಲೆ ಏರಿಕೆ ಶಾಕ್.

ಇದನ್ನು ಓದಿ : ಅಲ್ಪಸಂಖ್ಯಾತ ನಿಗಮದಿಂದ 8 ಹೊಸ ಸ್ಕೀಂ ಜಾರಿ : ಜಮೀರ್ ಅಹಮದ್

ಆದರೂ ಸಹ ಬೆಲೆ ಏರಿಕೆ ನಡುವೆಯೂ ಮಾರುಕಟ್ಟೆಯಲ್ಲಿ ಎತ್ತ ನೋಡಿದರು ಹೂ, ಹಣ್ಣುಗಳನ್ನು ಕೊಂಡುಕೊಳ್ಳುತ್ತಿರುವ ಜನರು.

ಸದ್ಯ ನಗರದ ಮಾರುಕಟ್ಟೆಗಳಲ್ಲಿ ದುಬಾರಿಯಾದ ಹಣ್ಣಿನ ಬೆಲೆಗಳು ಈಗಿವೆ.

ಅನಾನಸ್ (ಜೋಡಿ) – ರೂ 1೦೦
ಆ್ಯಪಲ್ ಕೆ.ಜಿ – ರೂ 12೦
ದ್ರಾಕ್ಷಿ ಕೆ.ಜಿ – ರೂ 2೦೦
ಸೀತಾಫಲ ಕೆ.ಜಿ – ರೂ 15೦
ಸಪೋಟ ಕೆ.ಜಿ – ರೂ 16೦
ಮೂಸಂಬಿ ಕೆ.ಜಿ -ರೂ 1೦೦
ಕಿತ್ತಲೆ ಹಣ್ಣು ಕೆ.ಜಿ – ರೂ 18೦
ಕಿವಿ ಹಣ್ಣು (3ಕ್ಕೆ) – ರೂ 12೦
ಡ್ರ್ಯಾಗನ್ ಪ್ರೂಟ್ – 1 ಹಣ್ಣಿಗೆ 8೦ ಇದೆ
ದಾಳೀಂಬೆ – ರೂ 2೦೦
ಬಟರ್ ಪ್ರೂಟ್ – ರೂ 2೦೦
ಮರಸೇಬು ಕೆ.ಜಿ – ರೂ 12೦
ಏಲಕ್ಕಿಬಾಳೆ ಕೆ.ಜಿ – ರೂ 13೦
ಪಚ್ಚಬಾಳೆ – ರೂ 40

ಹಣ್ಣುಗಳ ಬೆಲೆ ಹೀಗಿದ್ದರೆ, ಇನ್ನೂ ಹೂವಿನ ಬೆಲೆ ಗಗನಕ್ಕೆ ಮುಟ್ಟಿದೆ.

ಮಲ್ಲಿಗೆ ಕೆ.ಜಿ – ರೂ 5೦೦
ಸೇವಂತಿಗೆ ಕೆ.ಜಿ – ರೂ 24೦
ಗುಲಾಬಿ ಕೆ.ಜಿ- ರೂ 24೦
ಚೆಂಡು ಹೂ ಕೆ.ಜಿ- ರೂ 40
ಕಾಕಡ ಕೆ.ಜಿ- ರೂ 6೦೦
ಕನಕಾಂಬರ ಕೆ.ಜಿ- ರೂ 2೦೦೦
ಕಣಗಲು ಹೂ ಕೆ.ಜಿ -ರೂ 2೦೦
ಒಂದು ಕಮಲದ ಹೂ- 3೦ ರೂ
ಒಂದು ಕಮಲ ಹಾರದ ಬೆಲೆ -ರೂ 5೦೦
ಗುಲಾಬಿ ಗುಚ್ಚ – ರೂ 5೦
ತುಳಸಿ ಹಾರ- 1೦೦ ರೂ
ಚಿಕ್ಕ ಹೂವಿನ ದಿಂಡಿಗೆ- ರೂ 3೦-4೦
ಲಕ್ಷ್ಮಿ ಪ್ರತಿಕೃತಿ – ರೂ 150ರಿಂದ ಪ್ರಾರಂಭವಗುತ್ತದೆ.

ಅಷ್ಟೇ ಅಲ್ಲದೆ ನಾಳೆ, ನಾಡಿದ್ದು ವರಮಹಾಲಕ್ಷೀ ಪೂಜೆ ಇರುವುದರಿಂದ ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ.

RELATED ARTICLES

Related Articles

TRENDING ARTICLES