Thursday, January 23, 2025

ಪ್ರಕಾಶ್ ರೈ ಒಬ್ಬ ಮೂರ್ಖ : ಕೌರವ ಪಾಟೀಲ್

ಹಾವೇರಿ : ಚಂದ್ರಯಾನ-3 ಕುರಿತು ವ್ಯಂಗ್ಯವಾಗಿ ಟ್ವೀಟ್ ಮಾಡಿರುವ ನಟ ಪ್ರಕಾಶ್ ರೈ ವಿರುದ್ಧ ನಟ ಹಾಗೂ ಮಾಜಿ ಸಚಿವ ಬಿ.ಸಿ ಪಾಟೀಲ್ ಕಿಡಿಕಾಡಿದ್ದಾರೆ.

ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಆ ಮನುಷ್ಯ ಎಲ್ಲೋ ಕುಳಿತು ಮತನಾಡೋದು ಸರಿಯಲ್ಲ. ಈ ರೀತಿಯ ಹೇಳಿಕೆಗಳು ಮೂರ್ಖತನದ ಹೇಳಿಕೆಗಳು ಎಂದು ಕುಟುಕಿದ್ದಾರೆ.

ನಾವೆಲ್ಲರೂ ಚಂದ್ರಯಾನ-3 ಯಶಸ್ವಿಯಾಗಲಿ ಅಂತ ಪ್ರಾರ್ಥನೆ ಮಾಡ್ತಾ ಇದ್ದೀವಿ. ಇಡೀ ವಿಶ್ವ ಭಾರತದ ಕಡೆ ನೋಡ್ತಾ ಇದೆ. ಇದು ಭಾರತ ದೇಶದ ದೊಡ್ಡ ಸಾಧನೆ. ನಾಳೆ ಎಲ್ಲರೂ ಕಾತುರದಿಂದ ಕಾಯ್ತಾ ಇದಾರೆ. ಇದು ಮೂರ್ಖತನದ ಹೇಳಿಕೆ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್​ಗೆ ಹೋದ್ರೆ ಮಂತ್ರಿ ಆಗಲ್ಲ

ಸ್ವಪಕ್ಷದವರ ಮೇಲೆ ಶಾಸಕ ಎಸ್​.ಟಿ ಸೋಮಶೇಖರ್ ಅಸಮಾಧಾನ ವಿಚಾರವಾಗಿ ಮಾತನಾಡಿದ ಅವರು, ಸೋಮಶೇಖರ್ ಅವರ ಮನಸ್ಸಿಗೆ ಬೇಜಾರ್ ಆಗಿದೆ. ಅವರು ಕಾಂಗ್ರೆಸ್​ ಪಕ್ಷಕ್ಕೆ ಹೋದ್ರೆ, ಇವರೇನೂ ಮಂತ್ರಿ ಆಗೊಲ್ಲ. ಅನುದಾನಕ್ಕೆ ಹೋದಾಗ ಭೇಟಿಯಾಗಿರಬೇಕು. ಹೀಗಾಗಿ, ಹೋಗಿರುತ್ತಾರೆ. ಯಾರು ನಮ್ಮ ಪಕ್ಷ ಬಿಟ್ಟು ಹೋಗಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES