Wednesday, January 22, 2025

10 ಲಕ್ಷ ಮೌಲ್ಯದ ಪೆಟ್ರೋಲ್​ ಮತ್ತು ಡೀಸೆಲ್​ ರಸ್ತೆಗೆ ಬಿಟ್ಟ ದುಷ್ಕರ್ಮಿಗಳು!

ಮಂಡ್ಯ : ರಾತ್ರೋರಾತ್ರಿ ಪೆಟ್ರೋಲ್ ಬಂಕ್ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು ಬಂಕ್​ನಲ್ಲಿದ್ದ ಪೆಟ್ರೋಲ್​ ಮತ್ತು ಡೀಸೆಲ್​ ನ್ನು ಹೊರಗೆ ಬಿಟ್ಟು  ಧ್ವಂಸ ಮಾಡಿದ ಪಾಂಡವಪುರ ತಾಲ್ಲೂಕನ ಬೇಬಿ ಗ್ರಾಮದಲ್ಲಿ ನಡೆದಿದೆ.

ಭಸ್ತಿರಂಗಪ್ಪ ಎಂಬುವವರಿಗೆ ಸೇರಿದ ಪೆಟ್ರೋಲ್ ಬಂಕ್ ಇದಾಗಿದ್ದು, ಕಳೆದ ರಾತ್ರಿ ಪೆಟ್ರೋಲ್​ ಬಂಕ್​ ಸಿಬ್ಬಂದಿ ಊಟಕ್ಕೆ ಹೋಗಿದ್ದ ವೇಳೆ ಹತ್ತು ಲಕ್ಷ ಮೌಲ್ಯದ ಸುಮಾರು ಎಂಟು ಸಾವಿರ ಲೀಟರ್​ ಪೆಟ್ರೋಲ್​ ಹಾಗು ಎರಡು ಸಾವಿರ ಲೀಟರ್​ ಡೀಸೆಲನ್ನು ರಸ್ತೆಗೆ ಹರಿಬಿಟ್ಟು ಹಾಳುಮಾಡಿದ್ದಾರೆ.

ಇದನ್ನೂ ಓದಿ: ವಿಚಾರಣೆ ಬಂದ ಪೊಲೀಸರ ಮೇಲೆ ಸೀಮೆ ಎಣ್ಣೆ ಸುರಿದು ಹಲ್ಲೆಗೆ ಮುಂದಾದ ಮಹಿಳೆ!

ಕಳೆದ ಎರಡು ತಿಂಗಳ ಹಿಂದೆಯಷ್ಟೆ ಭಸ್ತಿರಂಗಪ್ಪ ಎಂಬುವವರು  ಪೆಟ್ರೋಲ್ ಬಂಕ್ ಶುರುಮಾಡಿದ್ದರು, ಈ ದುಷ್ಕೃತ್ಯಕ್ಕೆ ಹಳೇ ದ್ವೇಶವೇ ಕಾರಣ ಎನ್ನಲಾಗುತ್ತಿದ್ದು ಸದ್ಯ ಈ ಪ್ರಕರಣವು ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

RELATED ARTICLES

Related Articles

TRENDING ARTICLES