Wednesday, January 22, 2025

ತಿಹಾರ್ ಜೈಲಿಗೆ ಹೋರಾಟ ಮಾಡಿ ಹೋಗಿದ್ರಾ? : HDK ಗುಡುಗು

ಬೆಂಗಳೂರು : ತಿಹಾರ್ ಜೈಲಿಗೆ ಹೋರಾಟ ಮಾಡಿ ಹೋಗಿದ್ರಾ? ಇಲ್ಲಿಯವರೆಗೆ ಸಂಪಾದನೆ ಮಾಡಿದ್ದು ಸಾಕು. ಇನ್ನು ಮೇಲಾದ್ರೂ ಜನರ ಕೆಲಸ ಮಾಡಿ ಎಂದು ಡಿಕೆಶಿ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಗುಡುಗಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇನ್ನೂ 5 ಅಲ್ಲ.. 15 ವರ್ಷಗಳ ಕಾಲ ನೀನೇ ಡಿಸಿಎಂ ಆಗಿ ಇರು. ಇಲ್ಲ ಸಿಎಂ ಬೇಕಾದ್ರೂ ಆಗು ಎಂದು ಕುಟುಕಿದ್ದಾರೆ.

ಕಾವೇರಿ ನೀರು ವಿವಾದ ಕುರಿತು ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ವಪಕ್ಷ ಸಭೆ ಕರೆದಿದ್ದಾರೆ. ನನಗೂ ಆಹ್ವಾನ ನೀಡಿದ್ದಾರೆ. ಸರ್ವಪಕ್ಷ ಸಭೆ ಕರೆಯಿರಿ ಅಂತ ನಾನೂ ಸಿಎಂಗೆ ಒತ್ತಾಯ ಮಾಡಿದ್ದೆ. ನಾಳೆ ಸಭೆಗೆ ಹೋಗುತ್ತೇನೆ. ಹೋಗಬೇಕಾದ್ದು ನಮ್ಮ ಕರ್ತವ್ಯ. ನಮ್ಮ ಸಲಹೆಗಳನ್ನು ನೀಡಲಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಗಾಂಭೀರ್ಯತೆ, ಗೌರವ ಉಳಿಸಿಕೊಳ್ಳಿ

ಬ್ರದರ್​.. ನಾನು ನೀರಾವರಿ ಸಚಿವರಿಗೆ ಒಂದು ಮಾತು ಹೇಳ್ತೀನಿ. ಕೊಟ್ಟು ತೆಗೆದುಕೊಳ್ಳುವ ನೀತಿ ಇರಬೇಕು ಅಂತ ಹೇಳಿದ್ದೆ. ಈ ರೀತಿ ಸುಳ್ಳು ಹೇಳಿಕೊಂಡು ಉಡಾಫೆ ರಾಜಕೀಯ ಮಾಡಬೇಡಿ. ಪ್ರತಿನಿತ್ಯ ನನಗೂ ಪೆನ್ ಕೊಡಿ ಅಂತ ಕೇಳಿದ್ದು ನಮ್ಮ ರಾಜ್ಯ ಹಾಳು ಮಾಡಲಿಕ್ಕಾ? ಹುಡುಗಾಟ ಆಡಬೇಡಿ, ನಿಮ್ಮ ಸ್ಥಾನದ ಗಾಂಭೀರ್ಯತೆ, ಗೌರವ ಉಳಿಸಿಕೊಳ್ಳಿ ಎಂದು ಡಿಕೆಶಿಗೆ ದಳಪತಿ ಟಕ್ಕರ್ ಕೊಟ್ಟಿದ್ದಾರೆ.

RELATED ARTICLES

Related Articles

TRENDING ARTICLES