Monday, December 23, 2024

ಚೆಸ್ ವಿಶ್ವಕಪ್ : ಮೊದಲ ಕ್ಲಾಸಿಕ್ ಗೇಮ್ ಡ್ರಾ

ಬೆಂಗಳೂರು : ಫಿಡೆ ವಿಶ್ವಕಪ್ ಚೆಸ್ ಟೂರ್ನಿಯ ಫೈನಲ್​ನಲ್ಲಿ ಭಾರತದ ಯುವ ಸೆನ್ಸೇಷನ್18 ವರ್ಷದ ಆರ್. ಪ್ರಜ್ಞಾನಂದ ಹಾಗೂ ಮ್ಯಾಗ್ನಸ್ ಕಾರ್ಲ್​ಸನ್ ನಡುವಿನ ಫೈಟ್ ಮುಂದುವರಿದಿದೆ.

ಇಂದು ನಡೆದ ಮೊದಲ ಕ್ಲಾಸಿಕಲ್ ಗೇಮ್‌ನಲ್ಲಿ ಪ್ರಜ್ಞಾನಂದ ಅವರು 35 ನಡೆಗಳ ಬಳಿಕ ವಿಶ್ವದ ನಂ.1 ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಡ್ರಾ ಸಾಧಿಸಿದ್ದಾರೆ. ನಾಳೆ 2ನೇ ಕ್ಲಾಸಿಕ್ ಗೇಮ್​ ನಡೆಯಲಿದ್ದು, ಗೆದ್ದವರು ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಲಿದ್ದಾರೆ.

90 ನಿಮಿಷಗಳ ಮೊದಲ ಸುತ್ತಿನಲ್ಲಿ ಪ್ರಜ್ಞಾನಂದ ಅವರು ಕಾರ್ಲ್​ಸೆನ್ ಅವರನ್ನು ಆರಂಭದಲ್ಲೇ ಒತ್ತಡಕ್ಕೆ ಸಿಲುಕಿಸಿದ್ದರು. ಒಂದು ಹಂತ ದಾಟುತ್ತಿದ್ದಂತೆ ಪ್ರಗ್ನಾನಂದನ ಜಾಣ ನಡೆಗಳನ್ನು ಅರಿತ ಕಾರ್ಲ್​ಸನ್​ ರಕ್ಷಣಾತ್ಮಕ ಆಟ ಪ್ರದರ್ಶಿಸಿದರು. ಹೀಗಾಗಿ, ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.

ಟ್ರೈ ಬ್ರೇಕರ್​ನಲ್ಲಿ ವಿಶ್ವದ ನಂ.3 ಆಟಗಾರ ಫ್ಯಾಬಿಯಾನಾ ಅವರನ್ನು ಸೋಲಿಸುವ ಮೂಲಕ ಪ್ರಜ್ಞಾನಂದ ಅವರು ಫೈನಲ್ ಪ್ರವೇಶಿಸಿದ್ದಾರೆ. ಇದರೊಂದಿಗೆ ವಿಶ್ವನಾಥ್ ಆನಂದ್ ನಂತರ ಚೆಸ್​ ವಿಶ್ವಕಪ್​ನಲ್ಲಿ ಫೈನಲ್ ತಲುಪಿದ 2ನೇ ಭಾರತೀಯ ಆಟಗಾರ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

RELATED ARTICLES

Related Articles

TRENDING ARTICLES