Monday, December 23, 2024

ಕಾಂಗ್ರೆಸ್​ಗೆ ಬಂದ್ರೆ ಮುಳುಗಿ ಹೋಗ್ತಾರೆ : ಡಾ.ಜಿ. ಪರಮೇಶ್ವರ್

ಬೆಂಗಳೂರು : ಕಾಂಗ್ರೆಸ್ ‌ಸಮುದ್ರ ಇದ್ದಂತೆ. ಕೆಲವರು ಸಕ್ಸಸ್ ಆಗ್ತಾರೆ, ಆದ್ರೆ ಕೆಲವರು ಮುಳುಗಿ ಹೋಗ್ತಾರೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಹಲವು ಶಾಸಕರ ಸೇರ್ಪಡೆ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಕಾಂಗ್ರೆಸ್ ಪಕ್ಷಕ್ಕೆ ಬರುವವರು ಸಿದ್ಧಾಂತ ಒಪ್ಪಿಕೊಳ್ಳಬೇಕು. ಇದನ್ನ ಒಪ್ಪಿಕೊಂಡು ಪಕ್ಷಕ್ಕೆ ಬರಬೇಕು ಎಂದು ಸಲಹೆ ನೀಡಿದ್ದಾರೆ.

ನೈಸ್ ಯೋಜನೆ ಮುಟ್ಟುಗೋಲು ಹಾಕಿಕೊಳ್ಳಲು ಸಲಹೆ ವಿಚಾರವಾಗಿ ಮಾತನಾಡಿದ ಅವರು, ನೈಸ್ ಯೋಜನೆಯ ನ್ಯೂನತೆಯ ಬಗ್ಗೆ ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರು ಹೇಳಿದ್ದಾರೆ. ಮೈಸೂರು ರಸ್ತೆಯಲ್ಲಿ ನ್ಯೂನತೆ ‌ಇಲ್ವಾ? ಹಾಗೆಯೇ ಪ್ರಾಜೆಕ್ಟ್ ‌ಆಗುವಾಗ ನ್ಯೂನತೆ ಸರಿ ಮಾಡಬೇಕು. ಆದರೆ, ಪ್ರಾಜೆಕ್ಟ್ ಬೇಡ ಅಂತ ಹೇಳಬಾರದು ಎಂದು ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಮೊದಲಿನಿಂದ ಹೋರಾಟ ಮಾಡ್ತಿದ್ದಾರೆ. ಆದರೆ, ಆಧುನೀಕರಣಕ್ಕೆ ಪ್ರಾಜೆಕ್ಟ್ ಅಗತ್ಯ ಇದೆ. ಹಾಗೆಯೇ ತಪ್ಪನ್ನು ಸರಿ ಮಾಡಿಕೊಂಡು ಹೋಗಬೇಕು ಎಂದು ಪರಮೇಶ್ವರ್ ಹೇಳಿದ್ದಾರೆ.

ಪರಂ ಭೇಟಿ ಮಾಡಿದ ಸುಧಾಮ್

ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರನ್ನು ಪರಿಷತ್ ಸದಸ್ಯ ಸ್ಥಾನಕ್ಕೆ ಆಯ್ಕೆಯಾಗಿರುವ ಸುಧಾಮ್ ದಾಸ್ ಭೇಟಿ ಮಾಡಿದ್ದಾರೆ. ಬೆಂಗಳೂರಿನ ಸದಾಶಿವನಗರದ ಪರಮೇಶ್ವರ್ ನಿವಾಸಕ್ಕೆ ಭೇಟಿ ನೀಡಿರುವ ಅವರು ಪರಂ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. 1 ಗಂಟೆಗೂ ಹೆಚ್ಚು ಕಾಲ ಸಚಿವರ ಜೊತೆ ಮಾತುಕತೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES