Wednesday, January 22, 2025

ಶ್ರೀ ಕ್ಷೇತ್ರ ಸಿದ್ಧರಬೆಟ್ಟಕ್ಕೆ ಹರಿದು ಬಂದ ಭಕ್ತ ಸಾಗರ

ತುಮಕೂರು : ಪುಣ್ಯ ಸ್ನಾನದ ಪೂಜಾ ಮಹೋತ್ಸವದ ಹಿನ್ನೆಲೆ ತಾಯಿ ದರ್ಶನಕ್ಕೆಂದು ಜಿಲ್ಲೆಯ ಕೊರಟಗೆರೆ ತಾಲೂಕಿನ ಸಿದ್ಧರಬೆಟ್ಟಕ್ಕೆ ಬಂದ ಭಕ್ತ ಸಾಗರ.

ಶ್ರೀ ಕ್ಷೇತ್ರ ಸಿದ್ಧರಬೆಟ್ಟದಲ್ಲಿ ಎಂದಿನಂತೆ ಈ ವರ್ಷವು ದೊಡ್ಡಮ್ಮ ತಾಯಿಯ ಪುಣ್ಯ ಸ್ನಾನ ಪೂಜಾ ಮಹೋತ್ಸವ ನೆರವೇರಲಿದೆ. ಈ ಹಿನ್ನೆಲೆ ಇಂದು ಪೂಜಾ ಮಹೋತ್ಸವದ ಕಾರ್ಯಕ್ರಮದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಭಕ್ತರು ಭಾಗಿಯಾಗಿದ್ದರು.

ಇದನ್ನು ಓದಿ : ಬೆಂಗಳೂರು: ರಸ್ತೆ ಮದ್ಯೆ ಉರುಳಿಬಿದ್ದ ಬೃಹತ್​ ಮರ!

ಪ್ರತಿ ವರ್ಷ ಬುಕ್ಕಪಟ್ಟಣ ಗ್ರಾಮದಿಂದ ಬೆಟ್ಟಕ್ಕೆ ದೊಡ್ಡಮ್ಮ ತಾಯಿಯ ಆಗಮನವಾಗುತ್ತದೆ. ಆ ತಾಯಿಯ ದರ್ಶನ ಪಡೆಯಲು ವರ್ಷಗಳಿಂದಲೆ ಜನರು ಕಾಯುತ್ತ ಕುಳಿತಿರುತ್ತಾರೆ. ಮಹೋತ್ಸವದ ದಿನ ಅಣ್ಣ ಸಿದ್ದೇಶ್ವರನ ಭೇಟಿಯ ಜೊತೆಗೆ ದೇವಿಗೆ ಪುಣ್ಯ ಸ್ನಾನದ ದೋಣಿಯಲ್ಲಿ  ಶಕ್ತಿ ತುಂಬುವ ಕಾರ್ಯವನ್ನು ಮಾಡುಲಾಗುತ್ತದೆ.

ಅದರಿಂದ ಆ ದೃಶ್ಯವನ್ನು ಕಣ್ಣು ತುಂಬಿಕೊಳ್ಳಲು ಈ ಭಾರಿಯು ಕಾಡು ಹಾದಿಯಲ್ಲಿ ಬೆಟ್ಟ ಹತ್ತಿ ಬರುತ್ತಿರುವ ಭಕ್ತ ಸಾಗರ.

RELATED ARTICLES

Related Articles

TRENDING ARTICLES