Monday, December 23, 2024

ವಿಚಾರಣೆ ಬಂದ ಪೊಲೀಸರ ಮೇಲೆ ಸೀಮೆ ಎಣ್ಣೆ ಸುರಿದು ಹಲ್ಲೆಗೆ ಮುಂದಾದ ಮಹಿಳೆ!

ಉಡುಪಿ: ವಿಚಾರಣೆಗೆ ತೆರಳಿದ ಪೊಲೀಸರ ಮೇಲೆ ಮಹಿಳೆಯೊಬ್ಬಳು ಸೀಮೆಎಣ್ಣೆ ಸುರಿದು ಹಲ್ಲೆ ನಡೆಸಲು ಮುಂದಾದ ಘಟನೆ ಕುಂದಾಪುರ ತಾಲೂಕು ಕೋಟೇಶ್ವರ ಮುಖ್ಯ ರಸ್ತೆಯಲ್ಲಿ ನಡೆದಿದೆ.

ಸರೋಜಾ ದಾಸ್ ಹಲ್ಲೆ ನಡೆಸಲು ಮುಂದಾದ ಮಹಿಳೆ, ಕುಂದಾಪುರ ತಾಲೂಕಿನ ಕೋಟೇಶ್ವರ ಮುಖ್ಯರಸ್ತೆಯಲ್ಲಿ ಫ್ಯಾನ್ಸಿ ಅಂಗಡಿ ನಡೆಸುತ್ತಿದ್ದ ಸರೋಜಾ ದಾಸ್ ಸಾರ್ವಜನಿಕರಿಗೆ ಸಮಸ್ಯೆಯಾಗುವ ರೀತಿಯಲ್ಲಿ ರಸ್ತೆಯ ಮೇಲೆ ವ್ಯವಹಾರ ನಡೆಸುತ್ತಿದ್ದರು. ಈ ಕುರಿತು ಇಲ್ಲಿನ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು.

ಇದನ್ನೂ ಓದಿ: ಗೃಹಲಕ್ಷ್ಮಿ ಉದ್ಘಾಟನೆ ಬೆಳಗಾವಿಯಿಂದ ಮೈಸೂರಿಗೆ ಶಿಫ್ಟ್​ : ಗರಿಗೆದರಿದ ಸಿದ್ದು ಲೆಕ್ಕಾಚಾರ!

ಸ್ಥಳೀಯ ವಾಹನ ಸವಾರರ ದೂರಿನ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು, ವಿಚಾರಣೆಗೆ ಮುಂದಾದಾಗ ಪೊಲೀಸ್ ರ ಮೇಲೆ ಸೀಮೆಎಣ್ಣೆ ಸುರಿದು ಉದ್ದನೆಯ ಕೋಲಿನ ತುದಿಗೆ ಬೆಂಕಿ ಹಚ್ಚಿ ತಾಗಿಸಲು ಮುಂದಾಗಿದ್ದಾಳೆ, ಬಳಿಕ ಬಂಧಿಸಲು ಬಂದ ಪೊಲೀಸರನ್ನು ಎಳೆದಾಡಿ ಅವಾಂತರ ಸೃಷ್ಟಿ ಮಾಡಿದ್ದಾಳೆ.

ಸಾರ್ವಜನಿಕರ ಸಹಾಯದಿಂದ ಮಹಿಳೆಯನ್ನ ಬಂಧಿಸಿ ಬೆಂಕಿ ನಂದಿಸಿದ ಪೊಲೀಸರು, ಮಹಿಳೆ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈ ಹಿಂದೆಯೂ ಅಮಾವಾಸ್ಯೆ ಬೈಲು ಮತ್ತು ಶಂಕರನಾರಾಯಣ ಪೊಲೀಸ್ ಠಾಣೆಯನ್ನು ಪ್ರಕರಣ ದಾಖಲಾಗಿತ್ತು, ಯಾವುದೇ ಕೋರ್ಟು ವಿಚಾರಣೆಗೂ ಹಾಜರಾಗದೆ ಮಹಿಳೆ ತಪ್ಪಿಸಿಕೊಂಡಿದ್ದಳು.

ಮಹಿಳೆಯ ಬೆಂಕಿ, ಹಲ್ಲೆ ಪ್ರಕರಣದ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ಆಗಿದೆ.

RELATED ARTICLES

Related Articles

TRENDING ARTICLES