Monday, December 23, 2024

ಹಾವೇರಿಯಲ್ಲಿ ಮುಂದುವರೆದ ಕಳ್ಳರ ಕೈಚಳಕ

ಹಾವೇರಿ : ಮನೆಯವರು ಆಚೆ ಹೋಗಿದ್ದನ್ನು ಕಂಡು ಮನೆ ಬಾಗಿಲು ಹೊಡೆದು ಮನೆಗೆ ನುಗ್ಗಿದ್ದ ಕದೀಮರು ಘಟನೆ ಜಿಲ್ಲೆಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಸವೇಶ್ವರ ನಗರದ 17 ನೇ ಕ್ರಾಸ್ ನಲ್ಲಿರುವ ರಮೇಶ್ ಬಳ್ಳಾರಿ ಎಂಬುವವರ ಮನೆಯಲ್ಲಿ ನಡೆದಿದೆ. ನಿನ್ನೆ ಸಂಜೆ ವೇಳೆ ದೇವಸ್ಥಾನಕ್ಕೆಂದು ಹೋಗಿದ್ದನ್ನು ಗಮನಿಸಿದ ಕಳ್ಳರ ಗುಂಪು, ಇದೆ ಒಳ್ಳೇ ಸಮಯವೆಂದು ರಮೇಶ್ ಅವರ ಮನೆಗೆ ನುಗ್ಗಿದ ಕಳ್ಳರು.

ಇದನ್ನು ಓದಿ : ಬೈಕ್ ಮತ್ತು ಸ್ಕೂಟಿ ನಡುವೆ ಡಿಕ್ಕಿ ; ಬೈಕ್ ಸವಾರನಿಗೆ ಗಂಭೀರ ಗಾಯ

ಆದರೆ ಅದೃಷ್ಟವಶಾತ್ ಕಳ್ಳರು ಲಾಕರ್​ನಲ್ಲಿ ಯಾವುದೇ ಮೌಲ್ಯಯುತ ವಸ್ತು ಇರದ ಹಿನ್ನೆಲೆ 2 ಬೆಳ್ಳಿಯ ನಾಣ್ಯಗಳನ್ನು ಮಾತ್ರ ಕದ್ದಿದ್ದಾರೆ. ಬಳಿಕ ಮನೆಯ ಸದಸ್ಯರು ದೇವಸ್ಥಾನಕ್ಕೆ ಹೋಗಿ ಬರುವ ಅರ್ಧ ಗಂಟೆಯಲ್ಲಿ ಮನೆ ಬಾಗಿಲು ಮುರಿದು ಪರಾರಿಯಾಗಿದ್ದಾರೆ. ಕುಟುಂಬಸ್ಥರು ಬಂದು ನೋಡಿದಾಗ ಮನೆ ಬಾಗಿಲು ಓಪನ್ ಆಗಿತ್ತು.

ಈ ಘಟನೆ ಬಗ್ಗೆ ನಿನ್ನೆ ಪವರ್ ಟಿವಿಯಲ್ಲಿ ವರದಿ ಪ್ರಸಾರ ಮಾಡಲಾಗಿತ್ತು, ಒಂದು ದಿನ ಕಳೆದರೂ ಸಹ ಎಚ್ಚೆತ್ತುಕೊಳ್ಳದ ಪೋಲಿಸ್ ಇಲಾಖೆ

RELATED ARTICLES

Related Articles

TRENDING ARTICLES