Wednesday, January 22, 2025

ಚರಿತ್ರೆ ಸೃಷ್ಟಿ : ಫ್ಯಾಬಿಯಾನಾಗೆ ಸೋಲುಣಿಸಿದ ಪ್ರಗ್ನಾನಂದ

ಬೆಂಗಳೂರು : ಲಿಟ್ಲ್​ ಗ್ರ್ಯಾಂಡ್ ಮಾಸ್ಟರ್ ಖ್ಯಾತಿಯ 18 ವರ್ಷದ ಆರ್. ಪ್ರಗ್ನಾನಂದ ಇತಿಹಾಸ ಸೃಷ್ಟಿಸಿದ್ದಾರೆ.

ಟ್ರೈ ಬ್ರೇಕರ್​ನಲ್ಲಿ ವಿಶ್ವದ ನಂ.3 ಆಟಗಾರ ಫ್ಯಾಬಿಯಾನಾ ಅವರನ್ನು ಸೋಲಿಸುವ ಮೂಲಕ ಪ್ರಗ್ನಾನಂದ ಅವರು ಫೈನಲ್ ಪ್ರವೇಶಿಸಿದ್ದಾರೆ. ಇದರೊಂದಿಗೆ ವಿಶ್ವನಾಥ್ ಆನಂದ್ ನಂತರ ಚೆಸ್​ ವಿಶ್ವಕಪ್​ನಲ್ಲಿ ಫೈನಲ್ ತಲುಪಿದ ಎರಡನೇ ಭಾರತೀಯ ಆಟಗಾರ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

ಇನ್ನೂ ಫೈನಲ್​ನಲ್ಲಿ ವಿಶ್ವದ ನಂ.1 ಆಟಗಾರ ಮ್ಯಾಗ್ನಸ್​ ಕಾರ್ಲ್​ಸೆನ್​ ಅವರನ್ನು ಎದುರಿಸಲಿದ್ದಾರೆ. ವಿಶ್ವನಾಥ್ ಆನಂದ್ ಅವರು ಟ್ವೀಟ್ ಮಾಡುವ ಮೂಲಕ ಪ್ರಗ್ನಾನಂದ ಅವರ ಬೊಂಬಾಟ್ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ.

ರಾಹುಲ್ ಗಾಂಧಿ ಟ್ವೀಟ್

ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ ಅಭಿನಂದನೆ ತಿಳಿಸಿದ್ದಾರೆ. ‘FIDE ಚೆಸ್ ವಿಶ್ವಕಪ್ ಫೈನಲ್‌ಗೆ ತಲುಪಿರುವ ಆರ್ ಪ್ರಗ್ನಾನಂದ ಅವರಿಗೆ ಅಭಿನಂದನೆಗಳು. ಮ್ಯಾಗ್ನಸ್​ ಕಾರ್ಲ್​ಸೆನ್ ವಿರುದ್ಧದ ಪ್ರಶಸ್ತಿ ಪಂದ್ಯಕ್ಕೆ ನನ್ನ ಶುಭ ಹಾರೈಕೆಗಳು’ ಎಂದು ಬರೆದುಕೊಂಡಿದ್ದಾರೆ.

RELATED ARTICLES

Related Articles

TRENDING ARTICLES