Sunday, December 22, 2024

ನಾಗರ ಪಂಚಮಿ ದಿನ ; ಈ ರಾಶಿ ಜನರಿಗೆ ಇಂದು ಶುಭ ಯೋಗ

ದಿನ ಭವಿಷ್ಯ : ಈ ದಿನ ನಾಗ ಪಂಚಮಿ ಇರುವುದರಿಂದ ಈ ವರ್ಷ ಕೆಲ ರಾಶಿಚಕ್ರ ಚಿಹ್ನೆಗಳಿಗೆ ನಾಗ ಪಂಚಮಿ ದಿನ ತುಂಬಾ ಮಂಗಳಕರವಾಗಿರುತ್ತದೆ.

ಈ ವರ್ಷ ನಾಗ ಪಂಚಮಿ ಆಗಸ್ಟ್ 21 ರಂದು ಬಿದ್ದಿರುವ ಹಿನ್ನೆಲೆ ಈ ಶುಭ ಕಾಕತಾಳೀಯಿಂದಾಗಿ. ಈ ವರ್ಷ ನಾಗ ಪಂಚಮಿ ಮಹತ್ವವು ಬಹಳಷ್ಟು ಹೆಚ್ಚಾಗುತ್ತದೆ. ಪಂಚಮಿಯ ಶುಭದಿನವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ  ಬಹಳ ಅದೃಷ್ಟವನ್ನು ಸಾಬೀತುಪಡಿಸಲಿದೆ. ಆದ್ದರಿಂದ ಈ ದಿನ ಯಾವ ರಾಶಿಯವರಿಗೆ ಏನೇನು ಫಲವಿದೆ ಎಂದು ಕೆಳಗಿನ ರಾಶಿಫಲದಲ್ಲಿ ತಿಳಿದುಕೊಳ್ಳಿ.

ಇದನ್ನು ಓದಿ : ಕಡೆಗೂ ಯಶ್ ಫ್ಯಾನ್ಸ್​ಗೆ ಕ್ಷಮೆ ಕೇಳಿದ ತಮಿಳು ನಟ

ಮೇಷ ರಾಶಿ : ಇಂದು ಯಾವುದೆ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ತುಂಬಾ ದಿನಗಳಿಂದ ಅಡೆತಡೆಗಳು ಬರುತ್ತಿದ್ದ ಕಾರ್ಯಗಳಲ್ಲಿ ನಿಮ್ಮ ತಿಳುವಳಿಕೆಯಿಂದ ತುಂಬಾ ಸುಲಭದ ರೀತಿಯಲ್ಲಿ ಪರಿಹರಿಸಲ್ಪಡುತ್ತದೆ.

ವೃಷಭ ರಾಶಿ : ನಿಮ್ಮ ಉತ್ಸಾಹವನ್ನು ಕಡಿಮೆ ಮಾಡಲು ಬಿಡಬೇಡಿ, ಏಕೆಂದರೆ ಒಂಟಿತನವು  ಸೋಮಾರಿತನವು ನಕರಾತ್ಮಕ ಆಲೋಚನೆಗಳನ್ನು ಉಂಟುಮಾಡಬಹುದು. ಯಾವುದೇ ಹೊಸ ಹೂಡಿಕೆಯನ್ನು ಮಾಡುವ ಮೊದಲು, ಅದರ ಲಾಭ ಮತ್ತು ನಷ್ಟಕ್ಕೆ ಸಂಬಂಧಿಸಿದ ಮಾಹಿತಿಯನ್ನು ತಿಳಿದುಕೊಳ್ಳುವುದನ್ನು ಮರೆಯದಿರಿ.

ಮಿಥುನ ರಾಶಿ : ನೀವು ಸಾಮಾಜಿಕ ಹಾಗೂ ರಾಜಕೀಯ ಚಟುವಟಿಕೆಗಳಲ್ಲಿ ಪ್ರಾಬಲ್ಯ ಸಾಧಿಸುವಿರಿ. ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮ ಹಾಗೂ ಅನುಪಯುಕ್ತ ಚಟುವಟಿಕೆಯಿಂದ ಗಮನವನ್ನು ಬೇರೆಡೆಗೆ ತಿರುಗಿಸುವಲ್ಲಿ ಅಧ್ಯಯನದತ್ತ ಗಮನ ಹರಿಸಬೇಕು.

ಕಟಕ ರಾಶಿ : ಯಾವುದೇ ಆಸ್ತಿ ಅಥವಾ ಬೆಲೆ ಬಾಳುವ ವಸ್ತುವಿನ ಖರೀದಿ ಮತ್ತು ಮಾರಾಟಕ್ಕೆ ಸಂಬಂಧಿಸಿದ ಯೋಜನೆ ಏನಾದರೂ ಇದ್ದರೆ, ಇವತ್ತೇ ಮಾಡಿಕೊಳ್ಳಿ. ಈ ಸಮಯದಲ್ಲಿ ಅನುಭವಿ ವ್ಯಕ್ತಿಗಳಿಂದ ಸಲಹೆ ಮತ್ತು ಮಾರ್ಗದರ್ಶನವನ್ನು ಪಡೆಯುವುದು ಅವಶ್ಯಕ. ಹಳೆಯ ವಿಷಯಗಳನ್ನು ಮರೆತು ಮುಂದೆ ನಡೆಯುವುದು ಒಳ್ಳೇಯದು.

ಸಿಂಹ ರಾಶಿ : ಯುವಕರು ಕೆಟ್ಟ ಸಹವಾಸ ಹಾಗೂ ಕಟ್ಟ ಅಭ್ಯಾಸಗಳಿಂದ ದೂರ ಇರುವುದು ಒಳ್ಳೇಯದು. ಮನೆಯವರ ಸಲಹೆ ಮತ್ತು ಮಾರ್ಗದರ್ಶನವನ್ನು ಅನುಸರಿಸುವುದರಿಂದ ತಮ್ಮಿಂದ ಯಾವುದೇ ತಪ್ಪಿನಿಂದ ನಿಮ್ಮನ್ನು ರಕ್ಷಿಸುತ್ತದೆ.

ಕನ್ಯಾ ರಾಶಿ : ದಿನವಿಡೀ ಕಾರ್ಯನಿರತರಾಗಿದ್ದರು ಸಹ, ನೀವು ಕುಟುಂಬಕ್ಕಾಗಿ ಸರಿಯಾದ ಸಮಯವನ್ನು ತೆಗೆದುಕೊಳ್ಳುತ್ತೀರಿ. ವಿದ್ಯಾರ್ಥಿವರ್ಗವು ಅಧ್ಯಯನದತ್ತ ಗಮನ ಹರಿಸಬೇಕು. ಅನುಪಯುಕ್ತ ಕೆಲಸಗಳಿಂದ ದೂರವಿರಿ.

ತುಲಾ ರಾಶಿ : ಇತರರನ್ನು ನಂಬುವುದರಿಂದ ನೀವೆ ಹಾನಿ ಮಾಡಿಕೊಳ್ಳಬಹುದು, ಯಾರಾದರೂ ನಿಮ್ಮ ಭಾವನೆಗಳಿಂದ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ವಿದ್ಯಾರ್ಥಿಗಳು ಮತ್ತು ಯುವಕರು ಮೋಜು, ಮಸ್ತಿಗಾಗಿ ವೃತ್ತಿಯಲ್ಲಿ ರಾಜೀ ಮಾಡಿಕೊಳ್ಳಬಾರದು.

ವೃಶ್ಚಿಕ ರಾಶಿ : ಸಂಬಂಧಿಕರ ಆಗಮನದಿಂದ ಕುಟುಂಬದಲ್ಲಿ ಖುಷಿಯ ವಾತವರಣ ಇರುತ್ತದೆ. ದೈನಂದಿನ ಚಟುವಟಿಕೆಯಲ್ಲಿ ಕ್ರಮವನ್ನು ಕಾಪಡಿಕೊಳ್ಳುವುದು ಅನೇಕ ಸಮಸ್ಯೆಗಳಿಂದ ನಿಮ್ಮನ್ನು ಉಳಿಸುತ್ತದೆ. ಆರ್ಥಿಕ ಸ್ಥಿತಿಯು ಸುಧಾರಿಸುತ್ತದೆ.

ಧನು ರಾಶಿ : ನಿಮ್ಮ ಅತಿಯಾದ ಕೆಲಸದ ಹೊರೆಯಿಂದ ಪರಿಹಾರ ಪಡೆಯಲು, ಇತರರೊಂದಿಗೆ ನಿಮ್ಮ ಕೆಲಸವನ್ನು ಹಂಚಿಕೊಳ್ಳಿ. ಯಾವುದೇ ಸಮಸ್ಯೆಯನ್ನು ಶಾಂತಿಯುತ ರೀತಿಯಲ್ಲಿ ಪರಿಹರಿಸಲು ಪ್ರಯತ್ನಿಸಿ. ಎಲೆಕ್ಟ್ರಾನಿಕ್ ವಸ್ತುವಿನ ಹಾನಿಯು ದೊಡ್ಡ ವೆಚ್ಚಗಳಿಗೆ ಕಾರಣವಾಗಿದೆ.

ಮಕರ ರಾಶಿ : ಮನೆಯ ನಿರ್ವಹಣೆ ಮತ್ತು ಸರಿಯಾದ ವ್ಯವಸ್ಥೆಯಲ್ಲಿ ಕಾರ್ಯನಿರತತೆ ಇರುತ್ತದೆ. ಇತರರ ವಿಷಯದಲ್ಲಿ ಹೆಚ್ಚಾಗಿ ಹಸ್ತಕ್ಷೇಪ ಮಾಡಬೇಡಿ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಗಂಭೀರವಾಗಿರುತ್ತಾರೆ. ಹಳೆಯ ನಕರಾತ್ಮಕ ವಿಷಯಗಳು ವರ್ತಮಾನದಲ್ಲಿ ಪ್ರಾಬಲ್ಯ ಸಾದೀಸಲು ಬಿಡಬೇಡಿ.

ಕುಂಭ ರಾಶಿ : ನೀವು ಹೊಸ ಮನೆ ಅಥವಾ ಆಸ್ತಿಯನ್ನು ಖರೀದಿಸಲು ಯೋಚಿಸುತ್ತಿದ್ದರೆ, ನಿಮ್ಮ ಯೋಚನೆ ಸೂಕ್ತವಾಗಿದೆ. ಅನೇಕ ಜವಬ್ದಾರಿಗಳನ್ನು ಏಕಕಾಲದಲ್ಲಿ ನಿಭಾಯಿಸಬೇಕಾಗುತ್ತದೆ, ಇದರಿಂದಾಗಿ ಸ್ವಲ್ಪ ಕಿರಿಕಿರಿಯುಂಟಾಗುತ್ತದೆ.

ಮೀನ ರಾಶಿ : ನಾಯಾವುದೇ ವಿವಾದಾತ್ಮಕ ಸಂದರ್ಭಗಳು ಬಂದಾಗ ಶಾಂತವಾಗಿರುವುದು ಉತ್ತಮ, ಇಲ್ಲವಾದರೆ ನಿಮ್ಮ ಸ್ವಂತ ಕೆಲಸದಿಂದ ನಿಮ್ಮ ಗಮನವನ್ನು ಬೇರೆಡೆಗೆ ತಿರುಗಿಸಬಹುದು. ನಿಮ್ಮ ಕೆಲಸದಲ್ಲಿ ಆದಾಯವು ಸುಧಾರಿಸುತ್ತದೆ. ಇತರರ ವಿಷಯಗಳಲ್ಲಿ ಹಸ್ತಕ್ಷೇಪ ಬೇಡ.

RELATED ARTICLES

Related Articles

TRENDING ARTICLES