ಬೆಂಗಳೂರು : ಯಶವಂತಪುರ ವಿಧಾನಸಭಾ ಕ್ಷೇತ್ರದ ಅನ್ಯ ಪಕ್ಷದ ಕಾರ್ಯಕರ್ತರು, ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಬೀರಬಲ್ಲನ ಕಥೆ ಹೇಳಿದರು. ಆ ಮೂಲಕ ವಿಪಕ್ಷ ನಾಯಕರಿಗೆ ಟಾಂಗ್ ಕೊಟ್ಟರು.
ಅಕ್ಬರ ಪದೆ ಪದೇ ಬೀರಬಲ್ಲನನ್ನು ಕರೆಯುತ್ತಿದ್ದ. ಅದಕ್ಕೆ ಬೇರೆ ಮಂತ್ರಿಗಳ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ಆಗ ಅಕ್ಬರ್ ಕೇಳಿದ್ರಂತೆ, ಅಂಗೈಯಲ್ಲಿ ಯಾಕೆ ಕೂದಲು ಬೆಳೆದಿಲ್ಲ ಅಂತ. ಇದಕ್ಕೆ ಒಬ್ಬರಿಗೊಬ್ಬರು ಮುಖ ನೋಡಿಕೊಂಡರಂತೆ. ಸ್ವಾಮಿ ನೀವು ದಾನ ಕೊಟ್ಟು ಕೊಟ್ಟು ಅಂಗೈಯಲ್ಲಿ ಸವಿದು ಹೋಗಿದೆ ಸ್ವಾಮಿ ಅಂದಿದ್ದ ಬೀರಬಲ್ಲ. ಆಗ ನಿನ್ನ ಕೈಯಲ್ಲಿ ಯಾಕೆ ಬೆಳೆದಿಲ್ಲ ಅಂತ ಕೇಳಿದ್ರು.
ಆಗ ನಾನು ದಾನ ಇಸ್ಕೊಂಡು ಕೂದಲು ಸವಿದು ಹೋಗಿದೆ ಸ್ವಾಮಿ ಅಂದ ಬೀರಬಲ್ಲ. ಹಾಗಾದ್ರೆ, ಅಲ್ಲಿ ಕೂತವರ ಅಂಗೈಯಲ್ಲಿ ಯಾಕಿಲ್ಲ ಅಂದ ಅಕ್ಬರ್. ಆಗಲೂ ಬೇರೆಯವರು ಮುಖ ಮುಖ ನೋಡಿಕೊಳ್ಳುತ್ತಿದ್ದರು. ಈ ವೇಳೆ ನನಗೆ ಸಿಕ್ಕಿಲ್ಲವಲ್ಲ ಅಂತ ಕೈ ಹಿಸುಕಿಕೊಂಡು ಕೂದಲು ಸವಿದು ಹೋಗಿದೆ ಸ್ವಾಮಿ ಅಂತ ಬೀರಬಲ್ಲ ಹೇಳಿದ್ರು. ನವರಂಗಿ ನಾರಾಯಣ, ಅಶೋಕ್, ಮುನಿರತ್ನ ಕೈ ಹಿಸುಕಿಕೊಳ್ತಾ ಇದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಕೈ ಪರಿಚಿಕೊಳ್ತಾ ಇದ್ದಾರೆ ಎಂದು ಕುಟುಕಿದರು.
ದೊಡ್ಡವರ ಕಥೆ ನಾನು ನೋಡಿಕೊಳ್ತೀನಿ
ಕಾಂಗ್ರೆಸ್ ಪಕ್ಷದ ದೇವಸ್ಥಾನಕ್ಕೆ ಬಂದಿದ್ದೀರಿ. ಒಬ್ಬಬ್ಬರು 10 ಜನರನ್ನು ಕಾಂಗ್ರೆಸ್ಗೆ ಸೇರ್ಪಡೆ ಮಾಡಿ. ದೊಡ್ಡ ದೊಡ್ಡವರ ಕಥೆ ನಾನು ನೋಡಿಕೊಳ್ತೀನಿ. ಸೋಮಶೇಖರ್ ನಾನು ಸ್ನೇಹಿತರು. ಅವರು ಬರೋದು ಅವರಿಗೆ ಬಿಟ್ಟಿದ್ದು. ವಿರೋಧ ಪಕ್ಷದವರು ಏನೋ ಒಂದು ಹೇಳ್ತಾ ಇದ್ದಾರೆ. ಏನು ಮಾತನಾಡ್ತಾರೋ ಮಾತನಾಡಲಿ. ಬಾಯಿಗೆ ಬೀಗ ಇಲ್ಲ ಅವರಿಗೆ ಎಂದು ಗುಡುಗಿದರು.
ಇದು ಭಾಗ್ಯ.. ಇದು ನನ್ನ ಭಾಗ್ಯ..!
ನಾನು ಹೋರಾಟ ಮಾಡಿಕೊಂಡು ಬಂದಿದ್ದೀನಿ. ನಾನು ತಪ್ಪು ಮಾಡಲ್ಲಾ ರಾಜ್ಯದ ಅಭಿವೃದ್ಧಿಗೆ ಹೋರಾಟ ಮಾಡ್ತೀನಿ. ಎಲ್ಲರೂ ಪಕ್ಷ ಸೇರ್ಪಡೆಗೆ ಒತ್ತು ಕೊಡಬೇಕು ಎಂದು ಪುರದರದಾಸರ ‘ಇದು ಭಾಗ್ಯ.. ಇದು ಭಾಗ್ಯ.. ಇದು ನನ್ನ ಭಾಗ್ಯ..’ ಎಂಬ ಕಾವ್ಯವನ್ನು ಹೇಳಿದರು.