Thursday, January 23, 2025

ಬೈಕ್ ಮತ್ತು ಸ್ಕೂಟಿ ನಡುವೆ ಡಿಕ್ಕಿ ; ಬೈಕ್ ಸವಾರನಿಗೆ ಗಂಭೀರ ಗಾಯ

ಬೆಂಗಳೂರು : ಚಲಿಸುತ್ತಿದ್ದ ಬೈಕ್ ಮತ್ತು ಸ್ಕೂಟಿ ನಡುವೆ ಅಪಘಾತ ನಡೆದಿದ್ದು, ಬೈಕ್ ಸವಾರನಿಗೆ ಗಂಭೀರ ಗಾಯ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬ್ಯಾಡರಹಳ್ಳಿಯಿಂದ ಗೊಲ್ಲರ ಹಟ್ಟಿ ಕಡೆಗೆ ಹೋಗುತ್ತಿದ್ದ ಬೈಕ್ ಸವಾರ. ಈ ವೇಳೆ ಸ್ಕೂಟಿಯಲ್ಲಿ ಬಂದ ಇಬ್ಬರು ಅಂಜನಾ ನಗರದಲ್ಲಿ ಸ್ಟೈಲ್ ಅಗಿ ಯೂಟರ್ನ್ ತೆಗೆದುಕೊಂಡ ಪರಿಣಾಮ ಸ್ಕೂಟಿಗೆ ಡಿಕ್ಕಿ ಹೊಡೆದ ಬೈಕ್ ಸವಾರ. ಘಟನಾ ಹಿನ್ನೆಲೆ ಬೈಕ್ ಸವಾರನ ತಲೆಗೆ ಗಂಭೀರ ಗಾಯವಾಗಿದ್ದು, ಪ್ರಜ್ಞಾ ಹೀನಾ ಸ್ಥಿತಿಯಲ್ಲಿ ಬಿದ್ದಿದ್ದನು.

ಇದನ್ನು ಓದಿ : ರಾಜಧಾನಿಯ ಪೋಲಿಸ್ ಮೆಟ್ಟಿಲೇರಿದ ಅಜ್ಜ,ಅಜ್ಜಿ ಲವ್ ಸ್ಟೋರಿ ; ಏನಿದು ಪ್ರೇಮ ಕಹಾನಿ?

ತಕ್ಷಣ ಅಲ್ಲೇ ಇದ್ದ ಸಾರ್ವಜನಿಕರು ಸವಾರನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಸವಾರನಿಗೆ ಗಾಯವಾಗುತ್ತಿದ್ದಂತೆ ಸ್ಕೂಟಿಯಲ್ಲಿ ಬಂದಿದ್ದವರು ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಕೂಟಿಯಲ್ಲಿ ಬಂದ ಇಬ್ಬರು ಮಧ್ಯಪಾನ ಮಾಡಿರುವ ಶಂಕೆಯಿದೆ.

RELATED ARTICLES

Related Articles

TRENDING ARTICLES